ಮೂವತ್ತು ವರ್ಷಗಳಿಂದ ಸಾವಿರಾರು ಗ್ರಾಹಕರ  ಮನಗೆದ್ದಿರುವ ಸುಳ್ಯದ ದೀಕ್ಷಾ ಟ್ರೇಡರ್ ಬಟ್ಟೆ ಮಳಿಗೆಯಲ್ಲಿ  ಹೊಸ ಬಟ್ಟೆಗಳ ಅಪೂರ್ವ ಸಂಗ್ರಹ

ಮೂವತ್ತು ವರ್ಷಗಳಿಂದ ಸಾವಿರಾರು ಗ್ರಾಹಕರ  ಮನಗೆದ್ದಿರುವ ಸುಳ್ಯದ ದೀಕ್ಷಾ ಟ್ರೇಡರ್ ಬಟ್ಟೆ ಮಳಿಗೆಯಲ್ಲಿ  ಹೊಸ ಬಟ್ಟೆಗಳ ಅಪೂರ್ವ ಸಂಗ್ರಹ

ಕಳೆದ 30 ವರ್ಷಗಳ ಹಿಂದೆ ಸುಳ್ಯದಂತ ಪುಟ್ಟ ನಗರದಲ್ಲಿ ಹುಟ್ಟಿ ಕೊಂಡ ಬಟ್ಟೆ ಮಳಿಗೆ ದೀಕ್ಷಾ ಟ್ರೇಡರ್,  ಆರಂಭದಲ್ಲಿ ಸಣ್ಣದಾಗಿ ಆರಂಭಿಸಿದ ಬಟ್ಟೆ ವ್ಯಾಪಾರ ಮಳಿಗೆ,ದೀಕ್ಷಾ ಟ್ರೇಡರ್,  ಇಂದು ಸುಳ್ಯದ ಪ್ರತಿಷ್ಠಿತ ಬಟ್ಟೆ ಮಳಿಗೆಯಾಗಿ ರೂಪುಗೊಂಡಿದೆ, ಅಂದಿನಿಂದ ಇಂದಿನ ವರೆಗೂ ಸುಳ್ಯ ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ, ಸಾವಿರಾರು ಗ್ರಾಹಕರ ನೆಚ್ಚಿನ ಬಟ್ಟೆ ಖರೀದಿಯ ಕೇಂದ್ರವಾಗಿದೆ.ಆರಂಬಿಕ ಒಂದೇ ಮಳಿಗೆಯಲಿದ್ದ ಈ ಮಳಿಗೆ ಈಗ ಎರಡು ಅಂತಸ್ತಿನ ವರೆಗೂ ವ್ಯಾಪಿಸಿ ಸುಳ್ಯದ ಅತಿದೊಡ್ಡ ವಸ್ತ್ರ ಮಳಿಗೆಯಾಗಿದೆ.

ಇಲ್ಲಿ ಮದುವೆ ಸೀರೆಗಳು , ಚೂಡಿದಾರ್, ಎಲ್ಲಾ  ರೆಡಿಮೆಡ್ ಗಳು  ಹ್ಯಾಂಡ್ಲೂಮ್ಸ್ ಗಳು    ಮಾತ್ರವಲ್ಲದೆ  ಪುರುಷರ ಮಹಿಳೆಯರ ಎಲ್ಲಾ ತರದ ವಸ್ತ್ರಗಳ ಬೃಹತ್ ಬಂಡಾರ ಇಲ್ಲಿದೆ, ಸಂಸಾರ ಸಹಿತವಾಗಿ ಇಲ್ಲಿ ಬಂದರು ಇಲ್ಲಿ ಎಲ್ಲಾ ವಯೋಮಾನದವರಿಗೆ ಯೋಗ್ಯವಾದ ಬಟ್ಟೆಯನ್ನು ಇಲ್ಲಿ ಖರೀದಿಸಬಹುದಾಗಿದೆ.ಪ್ರಸಿದ್ದ ಕಂಪೆನಿಗಳ ಬಟ್ಟೆ ಗಳನ್ನೂ  ಮಾರಾಟ ಮಾಡುತ್ತೇವೆ , ನಮ್ಮಲ್ಲಿ  , ಉತ್ಕೃಷ್ಠ ದರ್ಜೆಯ ಪ್ರತಿಷ್ಠಿತ ಬ್ರ್ಯಾಂಡ್ ಗಳ ಬಟ್ಟೆಯನ್ನೂ ಮಾರಾಟ ಮಾಡುತ್ತೇವೆ, ನಮ್ಮಲ್ಲಿ ಬಟ್ಟೆ ಕೊಂಡ ಗ್ರಾಹಕ ತಂಬಾ ಸಮಯ ಆ ಬಟ್ಟೆಗಳನ್ನು  ಧರಿಸಿ ಸಂತುಷ್ಟನಾಗಬೇಕು ಎಂಬ ಧ್ಯೇಯ ನಮ್ಮದು ಎನ್ನುತ್ತಾರೆ ಇದರ ಮಾಲಕರು.

 ಶಾಲಾ ಆರಂಭದ ದಿನಗಳಲ್ಲಿಯಂತೂ  ನಗರದ ಹೆಚ್ಚಿನ ಶಾಲೆಯ ಮಕ್ಕಳಿಗೆ ಸಮವಸ್ತ್ರ ಬೇಕೆಂದರೆ ಇಲ್ಲಿ ಬರಲೇ ಬೇಕು, ಎಲ್. ಕೆ‌ ಜಿ  ಪುಟ್ಟ ಮಕ್ಕಳಿಂದ  ಹಿಡಿದು ಕಾಲೇಜು ವರೆಗಿನ ಎಲ್ಲಾ ವಯೋಮಾನದವರ ಹುಡುಗರ ಹಾಗೂ ಹುಡುಗಿಯರ ಸಮವಸ್ತ್ರ ಇಲ್ಲಿ ಒಪ್ಪವಾಗಿ ಜೋಡಿಸಿಇಡಲಾಗಿದೆ.ಇವೇ ಅಲ್ಲದೆ ವಿವಿದ ಕಂಪೆನಿಗಳ ಕೊಡೆಗಳು, ಇಲ್ಲಿ ಅತ್ಯಂತ ಮಿತದರದಲ್ಲಿ ದೊರೆಯುತ್ತದೆ.ಉಳಿದಂತೆ ಸರ್ಕಾರೇತರ ಸಂಸ್ಥೆಗಳ, ಸ್ವಯಂ ಸೇವಾ ಸಂಸ್ಥೆಗಳ ಸಮವಸ್ತ್ರ, ಮ್ಯಾಚಿಂಗ್ ಡ್ರೆಸ್, ಆಧುನಿಕತೆಯ ಜೋಡಣೆ ಸಾಮಾಗ್ರಿಗಳು ,ಟೈಲರಿಂಗ್ ಮೆಟೀರಿಯಲ್ ಒಂದೇ ಮಳಿಗೆಯಲ್ಲಿ ಲಭ್ಯವಿದೆ.

ಪ್ರಮುಖವಾಗಿ ಇಲ್ಲಿಯ ಕೆಲಸಗಾರರು ಗ್ರಾಹಕರೊಂದಿಗಿನ ಹೊಂದಾಣಿಕೆ ಅಪರೂಪವಾಗಿದೆ, ಗ್ರಾಹಕನ ಮನಸ್ಸಿಗೊಪ್ಪವ, ಬಣ್ಣದ ,ಅಳತೆಯ ಬಟ್ಟೆಯನ್ನು ಕ್ಷಣ ಮಾತ್ರದಲ್ಲಿ  ತಂದು  ಗ್ರಾಹಕನ ಮುಂದಿರಿಸುವ ತಂಡ ಇಲ್ಲಿದೆ.

ರಾಜ್ಯ