
ಪುತ್ತೂರು ಮೇ 28: ಪುತ್ತೂರಿನ ಪುರುಷರ ಕಟ್ಟೆ ಎಂಬಲ್ಲಿ ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಎಸ್. ಡಿ. ಪಿ. ಐ. ಕಾರ್ಯಕರ್ತರಯ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪುತ್ತೂರು ಠಾಣೆಯಲ್ಲಿ ಎರಡು ಕಡೆಗಳಿಂದ ದೂರು ದಾಖಲಾಗಿದೆ.

ಪುರುಷರ ಕಟ್ಟೆಯಲ್ಲಿರು ಸಾಪ್ಟ್ ಡ್ರಿಂಕ್ ಪ್ಯಾಕ್ಟರಿ ಬಿಂದು ಸಂಸ್ಥೆಯಲ್ಲಿ ಹಳೆಯ ಬೋರ್ ವೆಲ್ ಗಳನ್ನು ಪ್ಲಶ್ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಈ ಪರಿಸರದಲ್ಲಿ ಹೊಸದಾಗಿ ಬೋರ್ ವೆಲ್ ತೆಗೆಯುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸ್ಥಳೀಯ ಎಸ್ ಡಿ ಪಿ ಐ ಕಾರ್ಯಕರ್ತರು ಬೋರ್ ವೆಲ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಇದೇ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ, ಎಸ್ ಡಿ ಪಿ ಐ ಮುಖಂಡರು ಬಿಂದು ಪ್ಯಾಕ್ಟ್ರಿಯವರು ಬೂರ್ ವೆಲ್ ಪ್ಲಷ್ ಜೊತೆ ಹೊಸ ಬೋರ್ ವೆಲ್ ಕೊರೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ ಈ ಘಟನೆ ಕುರಿತಂತೆ ಎರಡೂ ಕಡೆ ಗುಂಪುಗಳಿಂದ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
