
ಮಂಗಳೂರು, ಮೇ 22: ನಗರದ ಕರಂಗಲ್ಪಾಡಿ ಕೋರ್ಟ್ ರಸ್ತೆಯ ದಾರಿಯಲ್ಲಿ ನಿನ್ನೆ ಸುರಿದ ಮಳೆಗೆ ಬೃಹತ್ ಗಾತ್ರ ದ ಮರ ಬಿದ್ದು ವಾಹನಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ 9.30ರ ಹೊತ್ತಿಗೆ ಸುರಿದ ಮಳೆಗೆ ನಗರ ಕರಂಗಲ್ಪಾಡಿ ರಾಧ ಮೆಡಿಕಲ್ ನ ಮುಂಭಾಗದ ಕೋರ್ಟ್ ರಸ್ತೆಯ ದಾರಿಯಲ್ಲಿ ಮರ ಬಿದ್ದಿದೆ, ಘಟನೆಯಲ್ಲಿ ಎರಡು ವಾಹನಗಳು ಜಖಂ ಗೊಂಡಿದೆ.

ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಹೊಯ್ಸಳ ಪೋಲಿಸರು ಹಾಗು ಮೆಸ್ಕಾಂ ಸಿಬ್ಬಂದಿಗಳು ಬಂದು ಮರ ತೆರವುಗೊಳಿಸಿದರು
