ಬೈಂದೂರು – ಟಿಸಿ ನೀಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿಧ್ಯಾರ್ಥಿ ಆತ್ಮಹತ್ಯೆ.

ಬೈಂದೂರು – ಟಿಸಿ ನೀಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿಧ್ಯಾರ್ಥಿ ಆತ್ಮಹತ್ಯೆ.

ಬೈಂದೂರು ಮೇ 21 : ಕಾಲೇಜಿಗೆ ಸೇರಲು ಶಾಲೆಯಲ್ಲಿ ಟಿಸಿ(ವರ್ಗಾವಣೆ ಪತ್ರ ) ನೀಡಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಎಸೆಸೆಲ್ಸಿ ಉತ್ತೀರ್ಣ ವಿದ್ಯಾರ್ಥಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಶಿರೂರು ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕನನ್ನು ಶಿರೂರು ಮೇಲ್ಪಂಕ್ತಿಯ ನಿತಿನ್‌ ಆಚಾರಿ (16) ಎಂದು ಗುರುತಿಸಲಾಗಿದೆ.

ಬೈಂದೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪೂರೈಸಿದ್ದು, ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ತೆರಳಿದ್ದ. ಎಸೆಸೆಲ್ಸಿ ತರಗತಿ ಮುಗಿಯುವ ಕೊನೆಯ ದಿನ ಕೆಲವು ವಿದ್ಯಾರ್ಥಿಗಳು ಶಾಲೆಯ ಹೊರಗಿನ ಸಿಸಿ ಕೆಮರಾ ಹಾಗೂ ಗೇಟ್‌ ಬೀಗವನ್ನು ಮುರಿದಿರುವ ಬಗ್ಗೆ ಉಪಪ್ರಾಂಶುಪಾಲರು ನಿತಿನ್‌ ಬಳಿ ವಿಚಾರಿಸಿದ್ದು, ಪಾಲಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ.

ಅವರ ಮಾತಿಗೆ ಒಪ್ಪಿ ಶಾಲೆಯಿಂದ ಮನೆಗೆ ತೆರಳಿದ್ದ ವಿದ್ಯಾರ್ಥಿ, ಈ ವಿಷಯ ಮನೆಯವರಿಗೆ ತಿಳಿದರೆ ತೊಂದರೆಯಾಗಬಹುದು ಎಂದು ಹೆದರಿ ಮಧ್ಯಾಹ್ನದ ಬಳಿಕ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ನಿತಿನ್ ಆತ್ಮಹತ್ಯಾ ಪತ್ರವನ್ನು ಬರೆದಿದ್ದು, ಅದರಲ್ಲಿ ತನಗೆ ಟಿಸಿ ಕೊಡದೆ ಮುಖ್ಯೋಪಾಧ್ಯಾಯರು ಕೆಟ್ಟದಾಗಿ ಬೈದಿದ್ದಾರೆ ಎಂದು ಬರೆದಿಟ್ಟು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ

ರಾಜ್ಯ