ಶಿರಾಡಿ ಘಾಟಿಯಲ್ಲಿ ಕಾರು- ಕಂಟೇನರ್ ನಡುವೆ ಅಪಘಾತ: ತಾಯಿ- ಮಗ ಮೃತ್ಯು

ಶಿರಾಡಿ ಘಾಟಿಯಲ್ಲಿ ಕಾರು- ಕಂಟೇನರ್ ನಡುವೆ ಅಪಘಾತ: ತಾಯಿ- ಮಗ ಮೃತ್ಯು

ಶಿರಾಡಿ, ಮೇ 21: ರಾ. ಹೆ.75ರ ಶಿರಾಡಿ ಘಾಟಿ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬೆಂಗಳೂರಿನಿಂದ ಬಂಟ್ವಾಳ ಕಡೆಗೆ ಬರುವ ಇನ್ನೋವಾ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ತಾಯಿ ಶಫಿಯಾ ಹಾಗೂ ಮಗ ಶೌಫಿಕ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕೊಂಡಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ

ರಾಜ್ಯ