
ಮಂಗಳೂರು(ಉಳ್ಳಾಲ): ಹರೇಕಳ ಹಾಜಬ್ಬ ಇವರ ಶಾಲೆಯ ಕಂಪೌಂಡ್ ಮಗುಚಿ ಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಉಳ್ಳಾಲದ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ.

ಮೂರನೇ ತರಗತಿ ವಿದ್ಯಾರ್ಥಿನಿ ಶಾಝಿಯಾ ಬಾನು (7) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ನ್ಯೂಪಡ್ಪು ನಿವಾಸಿ ಸಿದ್ದೀಕ್ ಹಾಗೂ ಜಮೀಲ ದಂಪತಿಗಳ ಪುತ್ರಿ.
