ಬಂಟ್ವಾಳ:  ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಪರಾರಿ: ವ್ಯಕ್ತಿ ಗಂಭೀರ 

ಬಂಟ್ವಾಳ:  ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಪರಾರಿ: ವ್ಯಕ್ತಿ ಗಂಭೀರ 

ಬಂಟ್ವಾಳ:  ದ್ವಿಚಕ್ರ ಸವಾರರೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಕಾಯರ್ಪಡ್ಪು ಬಳಿ ನಡೆದಿದೆ.

ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಪ್ರೀಮಿಯರ್ ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಯ ಸಿಬ್ಬಂದಿ ಚಿದಾನಂದ ಕಾಮತ್ ಎಂದು ಗುರುತಿಸಲಾಗಿದೆ.

ಗಂಭೀರ ಗಾಯಗೊಂಡ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಬಂಟ್ವಾಳ ಆಸ್ಪತ್ರೆಗೆ ರವಾನಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿದ್ದು ಡಿಕ್ಕಿ ಹೊಡೆದ ಕಾರಿಗಾಗಿ ಶೋಧಕಾರ್ಯ ಆರಂಭ ಆರಂಭ ಗೊಂಡಿದೆ.

ರಾಜ್ಯ