ನಾಳೆ ದಿ.ನವೀನ್ ಕುಮಾರ್ ರೈ ಮೇನಾಲ ಸ್ಮರಣಾರ್ಥ ಮೇನಾಲದಲ್ಲಿ ರಕ್ತದಾನ ಶಿಬಿರ.

ನಾಳೆ ದಿ.ನವೀನ್ ಕುಮಾರ್ ರೈ ಮೇನಾಲ ಸ್ಮರಣಾರ್ಥ ಮೇನಾಲದಲ್ಲಿ ರಕ್ತದಾನ ಶಿಬಿರ.

ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ. ಜಿಲ್ಲೆ ಸುಳ್ಯ ತಾಲೂಕು,, ಶ್ರೀಕೃಷ್ಣ ಭಜನಾ ಮಂದಿರ ಮೇನಾಲ ಇದರ ಆಶ್ರಯದಲ್ಲಿ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ. ನವೀನ್ ಕುಮಾರ್ ರೈ ಮೇನಾಲ ಸ್ಮರಣಾರ್ಥ ರಕ್ತದಾನ ಶಿಬಿರ ಮೇ.18ರಂದು  ಮೇನಾಲದ ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಚಾಲಕರಾದ ಚಂದ್ರಶೇಖರ ತಳೂರು, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಸುಧಾಕರ ರೈ ಪಿ.ಬಿ., ಸೇವಾ ಭಾರತಿ ಹೆಲ್ಪ್‌ಲೈನ್ ಟ್ರಸ್ಟ್ ಅಧ್ಯಕ್ಷ ಡಾ.ಮನೋಜ್ ಅಡ್ಡಂತಡ್ಕ, ರಾಧಾ ನಾರಾಯಣ ರೈ ಮೇನಾಲ, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಕಮಲಾಕ್ಷ ರೈ ಮೇನಾಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .

ರಾಜ್ಯ