ಸುಬ್ರಹ್ಮಣ್ಯ ತೋಟದಲ್ಲಿ ಕಟ್ಟಿದ್ದ ದನಗಳನ್ನು ಕರೆತರುವ ವೇಳೆ ಮೈಮೇಲೆ ಬಿದ್ದ ಭಾರೀ ಗಾತ್ರದ ಮರ:  ಮಹಿಳೆ  ಸ್ಥಳದಲ್ಲೇ ಸಾವು.

ಸುಬ್ರಹ್ಮಣ್ಯ ತೋಟದಲ್ಲಿ ಕಟ್ಟಿದ್ದ ದನಗಳನ್ನು ಕರೆತರುವ ವೇಳೆ ಮೈಮೇಲೆ ಬಿದ್ದ ಭಾರೀ ಗಾತ್ರದ ಮರ:  ಮಹಿಳೆ  ಸ್ಥಳದಲ್ಲೇ ಸಾವು.

.

ಸುಬ್ರಹ್ಮಣ್ಯ: ಗಾಳಿ – ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಸಂಭವಿಸಿದೆ.

ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆ ನಿವಾಸಿ ದಿ|ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಮೃತರು. ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮೀನಾಕ್ಷಿ ಅವರು ತಮ್ಮ ತೋಟದಲ್ಲಿ ಕಟ್ಟಿದ್ದ ದನವನ್ನು ಬಿಡಿಸಿ ತರಲು ಸಂಜೆ ತೆರಳಿದ್ದ ವೇಳೆ ಗಾಳಿ-ಮಳೆಗೆ ತೋಟದಲ್ಲಿನ ಉಪ್ಪಳಿಗೆ ಮರವೊಂದು ಇವರ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕಡಬ ಕಂದಾಯ ನಿರೀಕ್ಷಕ ಪ್ರಥ್ವಿರಾಜ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯ