
ಈ ದೇಶದ ಕಾನೂನಿನ ಜ್ಞಾನ ನಿಮಗಿದ್ದರೆ ಜೀವನದಲ್ಲಿ ಬಹುತೇಕ ಗೆದ್ದಂತೆಯೇ..ಇಡೀ ವಿಶ್ವದಲ್ಲಿಯೇ ಕಾನೂನಿಗೆ ಇರುವ ಮಹತ್ವ ಬೇರೆಲ್ಲೂ ಸಿಗೋದಿಲ್ಲ, ಸ್ಪರ್ಧಾತ್ಮಕ ಯುಗದಲ್ಲಿ ಕಾನೂನು ಕಲಿತು ವಕೀಲನಾಗಿ ತನ್ನದೇ ಸ್ವಂತ ಕಾಲಿನಲ್ಲಿ ನಿಂತಿರುವ ಅದೆಷ್ಟೋ ಲಕ್ಷಾಂತರ ಯುವಕರು ಯುವತಿಯರು ಇಂದು ಸ್ಫೂರ್ತಿಯಾಗಿ ನಮಗೆ ಕಾಣಸಿಗುತ್ತಾರೆ,ಇನ್ನಷ್ಟು ಮಂದಿ ನ್ಯಾಯಾದೀಶರಾಗಿ ದೇಶದ ಪರಮೋಚ್ಚ ಹುದ್ದೆಯನ್ನು ಅಲಂಕರಿಸಿದ್ದಾರೆ ,ಈ ಮೂಲಕ ಈ ದೇಶದ ಕಾನೂನಿನ ಮೌಲ್ಯವನ್ನು ಸಾರುತ್ತಿದ್ದಾರೆ.

ಹಲವಾರು ಮಂದಿ ಮಾಹಿತಿಯ ಕೊರತೆಯ ಕಾರಣದಿಂದ ಕಾನೂನು ಕಲಿಯುಲು ಹಿಂದೇಟು ಹಾಕುತ್ತಾರೆ, ಇದಕ್ಕೆ ಕಾರಣ ಹಲವಾರು, ಕಾನೂನು ಕಾಲೇಜಿಗೆ ಸರಿಯಾದ ಕ್ಯಾಂಪಸ್ ಇಲ್ಲದೇ ಇರೋದು ಕೂಡ ಮತ್ತೊಂದು ಕಾರಣ..

ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಸುಳ್ಯದಲ್ಲಿದೆ ಅತಿ ದೊಡ್ಡ ಸುಸ್ಸಜ್ಜಿತ ಕಾನೂನು ಕಾಲೇಜು,ಶಿಕ್ಷಣ ಭ್ರಹ್ಮ ಕುರುಂಜಿ ದಿ. ಡಾ.ವೆಂಕಟರಮಣ ಗೌಡರ ಕನಸಿನ ಕಾಲೇಜಿನಲ್ಲಿ ಸುಳ್ಯದ ಕಾನೂನು ಕಾಲೇಜು ಕೂಡ ಒಂದು , ಮುಂದಿನ ಪ್ರಜೆಗಳು ಕಾನೂನು ಅರಿತು, ಸದೃಡ ಸಮಾಜ ನಿರ್ಮಾಣವಾಗಬೇಕು ಎಂದು ಕುರುಂಜಿಯವರ ಕನಸ್ಸಾಗಿತ್ತು ಅಂತೇಯೇ ನಿರ್ಮಾಣಗೊಂಡ ಕಾಲೇಜನ್ನು ಡಾ. ಕುರುಂಜಿ ವೆಂಕಟರಮಣ ಗೌಡರ ಸುಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಇದರ ಅಧ್ಯಕ್ಷ ಡಾ .ಕೆ .ವಿ ಚಿದಾನಂದರವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.ಈ ಕಾನೂನು ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಪ್ರಭುದ್ಧ ಭೂಧಕ ಸಿಬ್ಬಂದಿಗಳನ್ನು ಹೊಂದಿದೆ ಇಂತಹ ಕಾನೂನು ಕಾಲೇಜು ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಕಾಣ ಸಿಗದು, ಸುಸ್ಸಜ್ಜಿತ ತರಗತಿ ಕೊಠಡಿಗಳು, ಅತ್ಯುನ್ನತ ಮಟ್ಟದ ಲೈಬ್ರೆರಿಗಳು ಇಲ್ಲಿಯ ವಿಶೇಷ , ಬೇರೆ ಜಿಲ್ಲೆ ಮತ್ತು ತಾಲೋಕುಗಳಿಗೆ ಹೋಲಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಸುಳ್ಯದಂತ ಸುಂದರ ಪ್ರಾಕೃತಿಕ ಪರಿಸರದಲ್ಲಿ ಕಾನೂನು ಅಭ್ಯಸಿಸಬಹುದಾಗಿದೆ, ಕನ್ನಡ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಯಲ್ಲೂ ಇಲ್ಲಿ ಕಾನೂನು ಕಲಿಯಲು ಅವಕಾಶವಿದೆ, ಪಿಯುಸಿ, ಮತ್ತು ಪಧವಿ ವಿದ್ಯಾರ್ಹತೆಯ ಯುವಕ ಯುವತಿಯರೂ ಕೂಡಲೇ ನೋಂದಾಯಿಸಿಕೊಳ್ಳಬಹುದು, ಇಲ್ಲಿ ಕಲಿಯಲು ಬರುವ ದೂರದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯವಿದೆ. ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲ್ಞಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ .
ಹೆಚ್ಚಿನ ವಿವರಗಳಿಗೆ: 7676476018 / 7353756813 ಅಥವಾ 08257- 230603 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

