
ಸುಬ್ರಹ್ಮಣ್ಯದಲ್ಲಿ ಅರೋಗ್ಯ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯದಲ್ಲಿ ನಡೆದ ಕಾಂಗ್ರೆಸ್ ಪಾರ್ಟಿ ಸಭೆಯಲ್ಲಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ದಿನೇಶ್ ಮಾಸ್ಟರ್, ಗ್ರಾಮ ಅಧ್ಯಕ್ಷ ಕಿಶೋರ್ ಅರಂಪಾಡಿ, ಚಂದ್ರಶೇಖರ ಚನ್ನಕಜೆ, ಶಿವರಾಮ, ದಿಲೀಪ್,ಅರುಣ ಅವರು.ಕಾಂಗ್ರೆಸ್ ಪಾರ್ಟಿ ಸೇರ್ಪಡೆ ಗೊಂಡಿದ್ದಾರೆ.ಈ ಪಾರ್ಟಿ ಸಭೆಯಲ್ಲಿ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಎಂ. ಎಲ್. ಸಿ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯ ಹರೀಶ್ ಇಂಜಾಡಿ,ಸುಧೀರ್ ಕುಮಾರ್,ಅಶೋಕ್ ನೆಕ್ರಾಜೆ,ನ್ಯಾಯವಾದಿ ವೆಂಕಪ್ಪ ಗೌಡ, ಶಿವರಾಮ್ ರೈ,ಹಾಗೂ ಸುಬ್ರಹ್ಮಣ್ಯ ಗ್ರಾಮದ ಕಾಂಗ್ರೆಸ್ ಪಾರ್ಟಿ ಸದಸ್ಯರು ಉಪಸ್ಥಿತರಿದ್ದರು.


