
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೂಲೆ ಮಜಲು ಗೌತಮ್ ರವರ ಮೇಲೆ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಪೆರಾಜೆ ಗ್ರಾಮ ಪಂಚಾಯತಿ ಸದಸ್ಯ ಸುಭಾಶ್ ಚಂದ್ರ ಬಂಗಾರುಕೋಡಿ ಹಾಗೂ ಬಿಜೆಪಿ ಮುಖಂಡ ಗುಡ್ಡೆಮನೆ ಮಹಾಬಲಾ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗೌತಮ್ ಪೋಲಿಸ್ ದೂರು ನೀಡಿದ್ದು ಚಿಕಿತ್ಸೆಗಾಗಿ ಕೊಡಗು ವೈದ್ಯಕೀಯ ಭೋದಕ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಎ. 22 ರಂದು ಸಂಜೆ ಗೌತಮ್ ರವರು ಚುನಾವಣಾ ಪ್ರಚಾರ ಕಾರ್ಯ ನಡೆಸಿ ಮನೆಗೆ ಬೈಕ್ ನಲ್ಲಿ ಮರಳುತ್ತಿದ್ದಾಗ ಕೋಟೆ ಪೆರಾಜೆ ಬಸ್ ಸ್ಟಾಪ್ ಬಳಿ ಆರೋಪಿಗಳಾದ ಸುಭಾಷ್ ಚಂದ್ರ ಬಂಗಾರುಕೋಡಿ ಮತ್ತು ಮಹಾಬಲ ಗುಡ್ಡೆ ಮನೆಯವರು ಅಡ್ಡ ಹಾಕಿ ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಹೇಳಿ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ ಎಂದು ಗೌತಮ್ ದೂರಿನಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ
ಆರೋಪಿಗಳಾದ ಸುಭಾಷ್ ಚಂದ್ರ ಬಂಗಾರುಕೋಡಿ ಹಾಗೂ ಮಹಾಬಲ ಗುಡ್ಡೆ ಮನೆ ಇವರ ವಿರುದ್ದ IPC ಸೆಕ್ಷನ್ 427,324,323,504 ರಡಿ FIR ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮುಖಂಡರಾದ ತೆನ್ನಿರ ಮೈನಾ,ಹೊಸೂರು ಸೂರಜ್,ಪೆರುಮಂಡ ಮನು ಸೇರಿದಂತೆ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗೌತಮ್ ಗೆ ಸಾಂತ್ವನ ಹೇಳಿದ್ದಾರೆ.
ಈ ಘಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ತೀವ್ರವಾಗಿ ಖಂಡಿಸಿದ್ದಾರೆ.ಕೊಡಗಿನಲ್ಲಿ ಬಿಜೆಪಿ ಯವರು ಮನೆ ಮನೆಗೆ ಹೋಗಿ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಧರ್ಮಜಾ ಆರೋಪಿಸಿದ್ದಾರೆ.
ಸುಬಾಷ್ ಚಂದ್ರ ಪ್ರತಿಕ್ರೀಯೆ.
ಕಾಂಗ್ರೇಸ್ ಕಾರ್ಯಕರ್ತರು ಚಾಮಕಜೆ ಪ್ರದೇಶದಲ್ಲಿ ಮಧ್ಯ ಹಂಚುವ ವಿಷಯ ತಿಳಿದು ಪ್ರಶ್ನೆ ಮಾಡಿದ್ದೆ, ಮತ್ತುಇದೇ ಸಂದರ್ಭ ಅಲ್ಲಿಗೆ ಬಂದ ಗೌತಮ್ ರಲ್ಲಿ ಇತ್ತೀಚೆಗೆ ಬಿಜೆಪಿ ಪ್ರಮುಖ ಮುಖಂಡರ ಮೇಲೆ ಬೆದರಿಕೆ ಹಾಕಿದ್ದರ ಬಗ್ಗೆಯೂ ಪ್ರಶ್ನೆ ಮಾಡಿದ್ದೆ, ಕಾಂಗ್ರೇಸ್ ಕಡೆಯಿಂದಲೂ ಹತ್ತು ಮೂವತ್ತು ಮಂದಿ ಬಂದಿದ್ದರು, ನನಗೂ ಗಾಯವಾಗಿದೆ, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ, ಘಟನೆಯ ದಿವಸ ಕಾಂಗ್ರೇಸ್ ಮುಖಂಡರು ಪ್ರಕರಣ ಇಲ್ಲಿಗೆ ಮುಗಿಸುವ ಎಂದಿದ್ದರು ಇದೀಗ ದೂರು ನೀಡಿದ್ದಾರೆ,
ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

