ಕಾಂಗ್ರೇಸ್ ಮಹಿಳೆಯರಿಗೆ ಸ್ವಾವಲಂಭಿ ಬದುಕು ಕೊಟ್ಟಿದೆ: ಮಹಿಳೆಯರು ಕಾಂಗ್ರೇಸ್ ಕೈ ಬಿಡಲಾರರು : ಮಮತಾ ಗಟ್ಟಿ ವಿಶ್ವಾಸ

ಕಾಂಗ್ರೇಸ್ ಮಹಿಳೆಯರಿಗೆ ಸ್ವಾವಲಂಭಿ ಬದುಕು ಕೊಟ್ಟಿದೆ: ಮಹಿಳೆಯರು ಕಾಂಗ್ರೇಸ್ ಕೈ ಬಿಡಲಾರರು : ಮಮತಾ ಗಟ್ಟಿ ವಿಶ್ವಾಸ

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ.ಬಿಜೆಪಿ ಸರಕಾರದ ಕೋಮು ದ್ವೇಶದ ರಾಜಕಾರಣ ಮತ್ತುಅಗತ್ಯ ವಸುಗಳ ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದು ಜನರು ಸರಕಾರ ಬದಲಾಯಿಸಲು ಕಾತುರತೆಯಿಂದಿದ್ದಾರೆ.ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡಲಾಗುವುದು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಮಮತಾ ಗಟ್ಟಿ ಹೇಳಿದ್ದಾರೆ

ಅವರು ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ದಕ್ಷಿಣ ಕನ್ನಡದ ಅಭ್ಯರ್ಥಿ ಸಭ್ಯರಾಗಿದ್ದು ಎಲ್ಲಾ ಭಾಷೆಯನ್ನು ಅರಿತವರಿದ್ದಾರೆ ಕಾಂಗ್ರೇಸ್ ಗ್ಯಾರಂಟಿ ಇಂದು ಪ್ರತಿ ಮನೆಗೆ ತಲುಪಿದ್ದು 

ಇದೀಗ ಮತ್ತೆ ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಾದರಿಯಲ್ಲಿ ರಾಷ್ಟ್ರದಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆ ನ್ಯಾಯಗಳನ್ನು ಘೋಷಿಸಿದ್ದು, ರೈತ ನ್ಯಾಯ ಕಾರ್ಯಕ್ರಮದಡಿಯಲ್ಲಿ ರೈತರ ಸಾಲ ಮನ್ನಾ ಮಾಡುವುದು. ಮಹಿಳಾ ನ್ಯಾಯದ ಅಡಿಯಲ್ಲಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂ. ನೀಡಲಾಗುವುದು. ಯುವ ನ್ಯಾಯದ ಅಡಿಯಲ್ಲಿ ೩೦ ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿಮಾಡಲಾಗುವುದು ಎಂದು ಹೇಳಿದರು.

ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ನಮಿಸಲು ಬಂದು ನಾಟಕ ಮಾಡುತ್ತಿದ್ದಾರೆ, ಇಷ್ಟು ಬಾರಿ ಬಂದಾಗಲೂ ಅಲ್ಲಿ ಹೋಗಿರಲಿಲ್ಲ , ನಾರಾಯಣ ಗುರುಗಳ ಚರಿತ್ರೆಯನ್ನು ಪಠ್ಯ ಕ್ರಮದಲ್ಲಿ ಸೇರಿಸಲು ವಿರೋಶದಿಸಿದವರು ಬಿಜೆಪಿಯವರೇ, ಸ್ಥಬ್ಧ ಚಿತ್ರ ಪ್ರದರ್ಶನಕ್ಕೂ ಅನುಮತಿ ನೀಡಿಲ್ಲಿ ಈಗ ಇಲ್ಲಿ ಬಂದಿರುವುದ ರಾಜಕೀಯ ನಾಟಕ ಎಂದು ಹೇಳಿದರು, 

 ಎನ್ ಜಯಪ್ರಕಾಶ್ ರೈ ಮಾತನಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕಾದುದು ಸತ್ಯ, ನಾವು ಅದೇ ಅಭಿಪ್ರಾಯ ಹೊಂದಿದ್ದೇವೆ ನೋಟಾ ಮತದಾನದಿಂದ ನ್ಯಾಯ ಸಿಗಲಾರದು, ನ್ಯಾಯಕ್ಕಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಮತ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.

ಭರತ್ ಮುಂಡೋಡಿ ಮಾತನಾಡಿ ಬಿಜೆಪಿಯ ನಾಯಕರ ಮತ್ತು ಕಾರ್ಯಕರ್ತರ ಮನೆಯ ಮಹಿಳೆಯರು ಕೂಡಾ ಮಾಸಿಕ ೨೦೦೦ ರೂ, ಅಕ್ಕಿಯ ಹಣ, ಉಚಿತ ವಿದ್ಯುತ್ ಬಿಲ್ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಅವರು ಖಂಡಿತವಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾರೆ. ವಿರೋಧಿಸುವ ನೈತಿಕತೆಯನ್ನು ಬಿಜೆಪಿಗರು ಕಳೆದುಕೊಂಡಿದ್ದಾರೆ. ಯಾರದಾದರೂ ಮನೆಗಳಿಗೆ ತಾಂತ್ರಿಕ ಕಾರಣಕ್ಕಾಗಿ ಗ್ಯಾರಂಟಿಗಳು ತಲುಪುತ್ತಿಲ್ಲವಾದರೆ ನಾವು ಅದರ ಬಗ್ಗೆ ಪರಿಶೀಲಿಸಿ, ಅಡೆತಡೆ ನಿವಾರಿಸಿ ಸೌಲಭ್ಯ ತಲುಪಿಸುತ್ತೇವೆ ಎಂದು ಹೇಳಿದರು.

ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಎಸ್.ಸಂಶುದ್ದೀನ್, ಎಂ. ವೆಂಕಪ್ಪ ಗೌಡ, ಕೆ.ಎಂ. ಮುಸ್ತಫ, ರಾಜ್ಯ ಮಹಿಳಾ ಕಾಂಗ್ರೆಸ್ ಸಂಯೋಜಕಿ ಶ್ರೀಮತಿ ಗೀತಾ ಮಂಗಳೂರು, ಪಿ.ಎಸ್. ಗಂಗಾಧರ್, ರಾಜೀವಿ ರೈ, ಗಫೂರ್ ಕಲ್ಮಡ್ಕ ಪ್ರವೀಣ್ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ತಿತರಿದ್ದರು

ರಾಜ್ಯ