ಮಂಗಳೂರು : ಅಯೋಧ್ಯೆಯ ರಾಮಲಲ್ಲನ ಶಿಲ್ಪಿಗೆ ಸಮರ್ಪಣೆಯಾದ ಸುಳ್ಯದ ಯುವಸಾಹಿತಿ ಉದಯ ಭಾಸ್ಕರ್ ರ ಯಕ್ಷಕಾವ್ಯ |ಶಿಲ್ಪಿ ಅರುಣ್ ಯೋಗಿರಾಜ್ ಮೆಚ್ಚುಗೆ

ಮಂಗಳೂರು : ಅಯೋಧ್ಯೆಯ ರಾಮಲಲ್ಲನ ಶಿಲ್ಪಿಗೆ ಸಮರ್ಪಣೆಯಾದ ಸುಳ್ಯದ ಯುವಸಾಹಿತಿ ಉದಯ ಭಾಸ್ಕರ್ ರ ಯಕ್ಷಕಾವ್ಯ |ಶಿಲ್ಪಿ ಅರುಣ್ ಯೋಗಿರಾಜ್ ಮೆಚ್ಚುಗೆ

ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಆಯೋಜಿಸಿದ ಸಮರ್ಪಣಂ ಕಲೋತ್ಸವದ ವೇದಿಕೆಯಲ್ಲಿ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಿಶ್ವಕರ್ಮ ಕುಲತಿಲಕ ಬಿರುದು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅರುಣ್ ಯೋಗಿರಾಜ್ ಅವರನ್ನು ಯಕ್ಷಕಾವ್ಯದ ಮೂಲಕ ಕೊಂಡಾಡಿ ವಿಶಿಷ್ಟ ರೀತಿಯಲ್ಲಿ ಅಭಿನಂದಿಸಲಾಯಿತು.

ಈ ಯಕ್ಷಕಾವ್ಯವನ್ನು ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಅವರು ರಚಿಸಿದ್ದು ಶ್ರೇಯಾ ಆಚಾರ್ಯ ಅವರ ಹಾಡುಗಾರಿಕೆ ಹಾಗೂ ಯಶಸ್ ಆಚಾರ್ಯ ಅವರ ನಾಟ್ಯದ ಮೂಲಕ ಅರುಣ್ ಯೋಗಿರಾಜ್ ಸಮ್ಮುಖದಲ್ಲಿ ಪ್ರಸ್ತುತಪಡಿಸಲಾಯಿತು. ಬಳಿಕ ತಾನು ರಚಿಸಿದ ಯಕ್ಷಕಾವ್ಯವನ್ನು ಉದಯಭಾಸ್ಕರ್ ಅವರು ಅರುಣ್ ಯೋಗಿರಾಜ್ ರಿಗೆ ಹಸ್ತಾಂತರಿಸಿದಾಗ ಸಾಹಿತ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಯೋಗಿರಾಜ್ ಉದಯಭಾಸ್ಕರ್ ರನ್ನು ಅಭಿನಂದಿಸಿ ಆಶೀರ್ವದಿಸಿದರು.

ರಾಮಲಲ್ಲನನ್ನು ನಿರ್ಮಿಸಿದ ಕರಸ್ಪರ್ಶದಿಂದ ಧನ್ಯನಾದ ಉದಯಭಾಸ್ಕರ್ ಸುಳ್ಯಈ ಕುರಿತಾಗಿ ಉದಯಭಾಸ್ಕರ್ ಅವರನ್ನುವಿಶೇಷ ಚಾನೆಲ್ ಮಾತನಾಡಿಸಿದಾಗ, ‘ವಿಶ್ವಕರ್ಮ ಕಲಾ ಪರಿಷತ್ ನ ಅಧ್ಯಕ್ಷರಾದ ಎಸ್.ಪಿ ಗುರುದಾಸ್, ಕೋಶಾಧಿಕಾರಿ ಎ.ಜಿ ಸದಾಶಿವ ಆಚಾರ್ಯ, ಕಾರ್ಯದರ್ಶಿ ರಮ್ಯಲಕ್ಷ್ಮೀಶ್ ಅವರು ನನಗೆ ಈ ಪುಣ್ಯಸೇವೆಯ ಅಮೂಲ್ಯ ಅವಕಾಶವನ್ನು ಒದಗಿಸಿದ್ದರು. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ.

ಅರುಣ್ ಯೋಗಿರಾಜ್ ಅವರಿಗೆ ನನ್ನ ಸಾಹಿತ್ಯವನ್ನು ಹಸ್ತಾಂತರಿಸಿದಾಗ ಬಹಳ ವಿನಮ್ರವಾಗಿ ಸ್ವೀಕರಿಸಿದ ಅವರು ಸಾಹಿತ್ಯದ ಕುರಿತಾಗಿ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಸಾಧ್ಯವಾದರೆ ಬಿಡುವಾದಾಗ ನಿಮಗೆ ಕರೆ ಮಾಡುತ್ತೇನೆ ಅಂದಿದ್ದಾರೆ. ಅವರ ಅಸಂಖ್ಯಾತ ಅಭಿಮಾನಿಗಳ ಮಧ್ಯೆ ನನಗವರು ಕರೆ ಮಾಡುತ್ತಾರೊ ಇಲ್ಲವೊ ಗೊತ್ತಿಲ್ಲ, ಆದರೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರೂ ಒಂದಿಷ್ಟು ಅಹಂಕಾರವಿಲ್ಲದೇ ಅಷ್ಟು ವಿನಮ್ರವಾಗಿ ಎಲ್ಲರೊಂದಿಗೆ ಬೆರೆಯುವ ವಿಧೇಯ ಮನಸ್ಸನ್ನು ಹೊಂದಿದ್ದಾರೆನ್ನುವುದೇ ನನಗೆ ಅಚ್ಚರಿಯ ಸಂಗತಿ.

ರಾಮಲಲ್ಲನ ವಿಗ್ರಹವನ್ನು ಕೆತ್ತಿದ ಪುಣ್ಯದ ಕರಗಳನ್ನು ಸ್ಪರ್ಶ ಮಾಡಿದಾಗ ಪುಳಕಿತನಾದೆ, ಈ ಭಾಗ್ಯ ಸಿಕ್ಕಿದ್ದೇ ಜೀವನದ ಧನ್ಯತೆಯ ಕ್ಷಣಗಳು, ಅವರೊಂದಿಗೆ ಕಳೆದ ಕೆಲಕ್ಷಣಗಳನ್ನು ಎಂದೆಂದಿಗೂ ಮರೆಯಲಾಗದ್ದು’ ಎಂದು ಭಾವುಕರಾಗಿ ನುಡಿದರು.ವೇದಿಕೆಯಲ್ಲಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಅಯೋಧ್ಯೆಯ ರಾಮಮಂದಿರದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ರಾಜ್ಯ