
ಕುಮಾರಧಾರ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಚರಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಇದೀಗ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆ ಅಡಿಯಲ್ಲಿ ಮೊಸಳೆಯೊಂದು ಸತ್ತು ಬಿದ್ದಿರುವ ಘಟನೆ ವರದಿಯಾಗಿದೆ.

ಈ ಸೇತುವೆ ಅಡಿ ಭಾಗದಲ್ಲಿ ಕುಮಾರಧಾರ ನದಿ ಹರಿಯುತ್ತಿದ್ದು ನೀರು ಕಲುಷಿತಗೊಂಡು ಜಲಚರಗಳು ಸಹಿತ ಮೊಸಳೆ ಸತ್ತು ಹೋಗಿದೆ ಎನ್ನಲಾಗುತ್ತಿದೆ.
ಈ ನದಿಯಲ್ಲಿ ನೀರಿನ ಹರಿವು ನಿಂತಿದ್ದು ಅಲ್ಲಲ್ಲಿ ನೀರು ನಿಂತಿದೆ. ನಿರೀನ ಅಭಾವದಿಂದಲೇ ಸತ್ತಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ . ಇನ್ನುಸಿಹಿ ನೀರಿನ ಮೀನು ಹಿಡಿಯಲು ಕೆಲವರು ಕೆಮಿಕಲ್ ಮಿಶ್ರಿತ ದ್ರಾವಣ ಹಾಕುತ್ತಿರುವ ಸುದ್ದಿಯೂ ಹರಡಿದ್ದು ಇದರಿಂದ ಜಲಚರಗಳಿಗೆ ಮಾರಕವಾಗಿದೆ .
ಸೇತುವೆ ಕೆಲ ಭಾಗದ ಸುಮಾರು 200 ಮೀ ಅಂತರದಲ್ಲಿ ನಾಕೂರು ಗಯವಿದ್ದು ಅಲ್ಲಿ ಮಹಷಿರ್ ಜಾತಿಯ ದೇವರ ಮೀನುಗಳ ಸಮೂಹವೇ ಇದೆ .ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
