
ಪೆರಾಜೆ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ (ರಿ) ಕಳೆದ 31 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ನಿರಂತರವಾಗಿ ಪೆರಾಜೆಯ ಶಾಸ್ತಾವು ದೇವಸ್ಥಾನದ ಮುಂಭಾಗದಲ್ಲಿ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯೂ ಎ.9 ರ ಮಂಗಳವಾರದಂದು 32 ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದೆ. ಈ ಪಂದ್ಯಾ ಕೂಟದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 15,000 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನವಾಗಿ 10,000 ನಗದು ಮತ್ತು ಶಾಶ್ವತ ಫಲಕ, ಹಾಗೂ ತೃತೀಯ ಬಹುಮಾನವಾಗಿ 5000 ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು ಅಲ್ಲದೆ ಉತ್ತಮ ದಾಳಿಗಾರ , ಉತ್ತಮ ಹಿಡಿತಗಾರ, ಸರ್ವಾಂಗೀಣ ಆಟಗಾರರಿಗೆ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಕ್ರೀಡಾ ಕೂಟದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ಕೂಡಲೇ 9449933454 / 7022211133 / 9900742787 / 9483317928 / 9743103904 / ಸಂಖ್ಯೆಗೆ ಸಂಪರ್ಕಿಸಿ ಪ್ರವೇಶ ಶುಲ್ಕ ನೀಡಿ ತಂಡವನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.



