ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ _"ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ"ಗಳವರ_ ಸನ್ಯಾಸ ಸ್ವೀಕಾರದ ಐವತ್ತನೇ ವರ್ಷದ ಸಂಭ್ರಮಾಚರಣೆ ನಿಮಿತ್ತ "ಸುವರ್ಣ ಭಾರತೀ ಮಹೋತ್ಸವ" ವನ್ನು ಹಮ್ಮಿಕೊಳ್ಳಲಾಗಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿಕ್ಕಮಗಳೂರು ಜಿಲ್ಲಾ ಘಟಕವು ಇಂದು ಭಾನುವಾರ ದಿನಾಂಕ 07.04.2024ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಶ್ರೀ ಶಂಕರ ಮಠದ 'ವಿದ್ಯಾಭಾರತಿ ಸಭಾಂಗಣ'ದಲ್ಲಿ' _ಶೃಂಗೇರಿ ಶ್ರೀ ಶಂಕರ ಮಠ_ ಬಸವನಹಳ್ಳಿ, ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ "ಸುವರ್ಣ ಭಾರತೀ ಮಹೋತ್ಸವ" ಮತ್ತು "ವಿಶ್ವ ಆರೋಗ್ಯ ದಿನಾಚರಣೆ" ಅಂಗವಾಗಿ _"ಬೃಹತ್ ರಕ್ತದಾನ ಶಿಬಿರ"_ ವನ್ನು ಆಯೋಜಿಸಲಾಗಿದೆ.
ಸಹೃದಯಿ ದಾನಿಗಳು, ಸಾರ್ವಜನಿಕರು, ಶ್ರೀ ಮಠದ ಸದ್ಭಕ್ತರು ಹಾಗೂ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಯಾಗಿಸಲು ತಮ್ಮೆಲ್ಲರಲ್ಲೂ ಕೋರಲಾಗಿದೆ.. 🙏🙏

- ಸ್ಥಳ : ವಿದ್ಯಾಭಾರತಿ ಸಭಾಂಗಣ
ಶೃಂಗೇರಿ – ಶ್ರೀ ಶಂಕರ ಮಠ
ಬಸವನಹಳ್ಳಿ ಮುಖ್ಯ ರಸ್ತೆ.
ಚಿಕ್ಕಮಗಳೂರು. - ದಿನಾಂಕ 07.04.2024
- ಸಮಯ : ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ..

