
ಈ ಭಾರಿಯ ಲೋಕ ಸಭಾ ಚುನಾವಣೆಯಲ್ಲಿ 18 ಕ್ಷೇತ್ರದಲ್ಲಿ ಜೆ ಡಿ ಎಸ್ ನಿರ್ಣಾಯಕ ಪಾತ್ರವಹಿಸಲಿದೆ, ಜಿಲ್ಲೆಯಲ್ಲಿಯೂ ಜೆಡಿಎಸ್ ಬಿಜೆಪಿ ಜೊತೆ ಬೂತ್ ಮಟ್ಟದಲ್ಲಿ ಒಂದಾಗಿ ಕೆಲಸ ಮಾಡಲಿದೆ.ಈ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗಲು ಸಂಕಲ್ಪಮಾಡಿದ್ದೇವೆ ಎಂದು ಜೆ ಡಿ ಎಸ್ ರಾಜ್ಯ ವಕ್ತಾರ ಎಂ.ಬಿ ಸದಾಶಿವ ಹೇಳಿದ್ದಾರೆ ಅವರು ಸುಳ್ಯದ ಬಿಜೆಪಿ ಕಚೇರಿಯಲ್ಲಿ ಬಿ ಜೆ ಪಿ ಸ್ಥಾಪನಾ ದಿನ ಮತ್ತು ಪಕ್ಷಗಳ ಮೈತ್ರಿ ಸಭೆಯಲ್ಲಿ ಭಾಗವಹಿ ಮಾತನಾಡಿದರು.


ಲೋಕಸಬಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆ ಡಿ ಎಸ್ ಮೈತ್ರಿ ಗೋಷಣೆ ಮಾಡಿದ್ದು, ಸುಳ್ಯದ ಬಿ ಜೆಪಿ ಕಚೇರಿಯಲ್ಲಿ ಮೈತ್ರಿ ಸಭೆಯನ್ನು ಬಿ ಜೆ ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅದ್ಯಕ್ಷತೆಯಲ್ಲಿ ಕರೆಯಲಾಗಿತ್ತು.

ಈ ಸಭೆಗೆ ಉಭಯ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು ವೇದಿಕೆಯಲ್ಲಿ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ,ಸುಳ್ಯ ಜೆ ಡಿ ಎಸ್ ಅಧ್ಯಕ್ಷ. ಸುಕುಮಾರ್ ಕೊಡ್ತುಗುಳಿ, ಕಡಬ ಜೆ ಡಿ ಎಸ್ ಅದ್ಯಕ್ಷ ಮೀರಾ ಸಾಹೇಬ್, ಬಿ ಜೆ ಪಿ ಪ್ರಮುಖರಾದ ಎಸ್ ಎನ್ ಮನ್ಮಥ, ರಾಕೇಶ್ ರೈ ಕೆಡೆಂಜಿ, ವಿನಯಕುಮಾರ್ ಕಂದಡ್ಕ,ಉಪಸ್ತಿತರಿದ್ದರು, ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಈ ಬಾರಿ ನಮ್ಮ ಪಕ್ಷದ ಜೊತೆ ಜೆ ಡಿ ಎಸ್ ಮೈತ್ರಿಯಾಗಿದ್ದು ಜಿಲ್ಲೆಯಲ್ಲಿ ಗೆಲುವಿನ ಅಂತರ ಹೆಚ್ಚಲಿದೆ ,ಎಂದು ಹೇಳಿದರಲ್ಲದೆ ಜೊತೆಯಾಗಿ ಕೆಲಸ ಮಾಡುವುದಾಗಿ ಘೋಷಿಸಿದರು.ಸಭೆಯಲ್ಲಿ ಜೆ ಡಿ ಎಸ್ ಹಾಗೂ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು.


