ಬಂಟ್ವಾಳದಲ್ಲಿ ಗೊಡೌನನಲ್ಲಿ ಇರಿಸಲಾಗಿದ್ದ ಸುಮಾರು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳವು

ಬಂಟ್ವಾಳದಲ್ಲಿ ಗೊಡೌನನಲ್ಲಿ ಇರಿಸಲಾಗಿದ್ದ ಸುಮಾರು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳವು

ಬಂಟ್ವಾಳ: ಗೊಡೌನನಲ್ಲಿ ಇರಿಸಲಾಗಿದ್ದ ಸುಮಾರು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಅಬ್ದುಲ್ ಹಕೀಂ ಎಂಬವರ ವಾಸದ ಮನೆಯ ಹಿಂಭಾಗದಲ್ಲಿರು ಗೊಔನ್ ನಲ್ಲಿ ಇರಿಸಲಾಗಿದ್ದ ಸುಮಾರು 1.35.000 ರೂ ಮೌಲ್ಯದ 25 ಅಡಿಕೆ ಗೋಣಿ ಚೀಲಗಳು ಕಳವಾಗಿದೆ.ಸುಲಿಯದ75 ಗೋಣಿ ಅಡಿಕೆಗೋಣಿ ಚೀಲಗಳನ್ನು ಗೊಡೌನ್ ನಲ್ಲಿ ಇರಿಸಲಾಗಿದ್ದು, ಅದರಲ್ಲಿ ತಲಾ 18 ಕೆ.ಜಿ.ಯಂತೆ 450 ಕೆ.ಜಿ ಅಡಿಕೆಯ 25 ಗೋಣಿ ಚೀಲಗಳನ್ನು ಕಳ್ಳತನ ಮಾಡಿದ್ದಾರೆ.ಗೊಡೌನ್ ನ ಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿರುವ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪುಂಜಾಲಕಟ್ಟೆ ಎಸ್. ಐ.ಉದಯರವಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ