
ಕರಾವಳಿ ಪ್ರವಾಸಿಗರಿಗೆ ರಾಯಲ್ ಎಂಟರ್’ಪ್ರೈಸಸ್ ನ’ ದಿ ರಾಯಲ್ ಮೊಂಟೆನಾ ಹೋಟೆಲ್ ಮತ್ತು ರೆಸಾರ್ಟ್ ಕೊಡುಗೆ ನೀಡಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ ಅವರು ಕುಕ್ಕೇ ಸುಬ್ರಹ್ಮಣ್ಯ ಸಮೀಪ ಏನೆಕಲ್ಲಿನಲ್ಲಿ ನೂತನವಾಗಿ ಆರಂಭಿಸಿರುವ ‘ ದಿ ರಾಯಲ್ ಮೊಂಟೆನಾ ಹೋಟೆಲ್ ಮತ್ತು ರೆಸಾರ್ಟ್ ನ್ನು ಎ. 3 ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು, ಕರವಾವಳಿ ಪ್ರವಾಸಿಗರಿಗೆ ಅನುಕೂಲ ವಾಗಬಲ್ಲ ಇಂತಹ ಪ್ರವಾಸಿ ದಾಮಗಳು ಇನ್ನಷ್ಟು ತೆರೆದು ಕೊಳ್ಳಲಿ ಎಂದು ಹೇಳಿದರು.


ಈ ಸಂದರ್ಭದಲ್ಲಿ ಸಂಸ್ಥೆ ಮಾಲಕ ಹರ್ಷ ಕುಟ್ಟಪ್ಪ ಮಾತನಾಡಿ ಕರಾವಳಿ ಪ್ರವಾಸೋದ್ಯಮದಲ್ಲಿ ಮತ್ತೊಂದು ಮೈಲಿಗಲ್ಲು ಯೇನೆಕಲ್ಲಿನ ದಿ ರಾಯಲ್ ಮೊಂಟಾನಾ ರೆಸಾರ್ಟ್‌ಆಗಿದ್ದು ಜತೆಗೆ ಕಾರವಾರದಿಂದ ಕೂರ್ಗ್’ವರೆಗೆ ಕುಂದಾಪುರದಿಂದ ಕುಕ್ಕೆವರೆಗೆ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ . ಈ ಭಾಗದಲ್ಲಿರುವ ಬೆಳಕಿಗೆ ಬಾರದ ಅದ್ಭುತ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೆರೆದಿಡುವುದೇ ಸಂಸ್ಥೆಯ ಉದ್ದೇಶವಾಗಿದೆಎಂದು ಹರ್ಷ ಪುಟ್ಟಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖಥಕ್ ನರ್ತಕಿ, ಖ್ಯಾತ ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿಮುಖ್ಯಸ್ಥೆ ಶ್ರೀಮತಿ ರೂಪಾ ಹರ್ಷ ಸಂಸ್ಥೆಯ ನಿರ್ದೇಶಕರಾದ ಕು. ಧನುಶ್ರೀ, ಗಗನ್ ಹರ್ಷ, ವ್ಯವಸ್ಥಾಪಕ ರೂಬೆಲ್, ಪಿ ಆರ್ ಒ ರವಿ ಶಂಕರ್,ಸೇರಿದಂತೆ ನೂರಾರು ಮಂಧಿ ಉಪಸ್ತಿತರಿದ್ದರು.

