ಗಣಗೂರು ಗ್ರಾಮದಲ್ಲಿ ರೈತ ಮುಖಂಡನ ಮೇಲೆ ಅಪರಿಚಿತರಿಂದ ಗುಂಡು :  ಅಪಾಯದಿಂದ ಪಾರು

ಗಣಗೂರು ಗ್ರಾಮದಲ್ಲಿ ರೈತ ಮುಖಂಡನ ಮೇಲೆ ಅಪರಿಚಿತರಿಂದ ಗುಂಡು : ಅಪಾಯದಿಂದ ಪಾರು

ಸೋಮವಾರಪೇಟೆ : ಅಪರಿಚಿರ ಹಾರಿಸಿದ ಗುಂಡೇಟಿನಿಂದ ರೈತ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಾಣಾಪಾಯದಿಂದ ಪಾರಾದ ಘಟನೆ ಗಣಗೂರು ಗ್ರಾಮದಲ್ಲಿ ನಡೆದಿದೆ.ಗ್ರಾಮ ನಿವಾಸಿ ಕೃಷಿಕ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖ‌ರ್ ಗಾಯಗೊಂಡವರು.

ಚಂದ್ರಶೇಖ‌ರ್ ಅವರು ಓಮಿನಿ ಕಾರಿನಲ್ಲಿ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳು ಗುಂಡುಹಾರಿಸಿದ್ದು, ಕಾರಿನ ಮುಂಭಾಗಕ್ಕೆ ಚಿಲ್ಲುಗಳು ನಾಟಿ ಕೈಬೆರಳುಗಳಿಗೆ ಗಾಯವಾಗಿದೆ.ಗಾಯಾಳು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಎಸ್‌.ಪಿ ರಾಮರಾಜನ್. ಡಿವೈಎಸ್‌ಪಿ ಆರ್.ವಿ ಗಂಗಾಧರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ತೀವ್ರಗೊಳಿಸಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ರಾಜ್ಯ