


ಇದೀಗ ಮಕ್ಕಳಿಗೆ ಶಾಲಾ ರಜಾ ಪ್ರಾರಂಭವಾಗಿದೆ, ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ರಜೆ ಅವಧಿಯಲ್ಲಿ ಬೇರೆ ಬೇರೆ ತರಬೇತಿ ನೀಡಿ ಮಕ್ಕಳನ್ನು ಇನ್ನಷ್ಟು ಪಕ್ವವಾಗಿಸಲು ಪ್ರಯತ್ನಿಸುತ್ತಾರೆ . ಆದರೆ ಹಲವು ಪೋಷಕರು ನಿಮ್ಮ ಮಕ್ಕಳನ್ನು ಯಾವುದೊ ದುಭಾರಿಯಾಗಿರುವ ಮನೊರಂಜನಾ ತರಭೇತಿ ಶಿಬಿರಕ್ಕೆ ಸೇರಿಸಿ ಸಮದಾನ ಪಟ್ಟುಕೊಳ್ಳುತ್ತಾರೆ ,ಆದರೆ ಅಪಾಯಕಾರಿ ಸಂದರ್ಭ ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಈ ತರಬೇತಿಗಳಿಂದ ಸಾಧ್ಯವಿಲ್ಲ ಇವೆಲ್ಲವನ್ನು ದೃಷ್ಟಿಯಲಿಟ್ಟುಕೊಂಡು ನಿಮ್ಮ ಮಕ್ಕಳು ಅಪಾಯಕಾರು ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಥವಾ ಇತರರನ್ನು ರಕ್ಷಿಸಲು ಈಜು ತರಬೇತಿ ಅತ್ಯಗತ್ಯ , ಹಾಗಾಗಿ ಇತರ ಮಾಮೂಲಿ ಶಿಭಿರಗಳಿಗಿಂತ ಈಜು ತರಭೇತಿ ಬಿನ್ನ ಮತ್ತು ಆರೋಗ್ಯ ಪೂರ್ಣ.

ಈಜು ಶಿಕ್ಷಣಕ್ಕೆ ಸೇರಿಸಿ ನಿಮ್ಮ ಮಕ್ಕಳನ್ನು ಇನ್ನಷ್ಟು ಭದ್ರ ಗೊಳಿಸಿ.

ಈ ಎಲ್ಲಾ ವಿಚಾರಗಳಿಂದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪೆರಾಜೆಯ ಶ್ರೀ ಆಯ್ಯಪ್ಪ ಸ್ವಾಮೀ ದೀಪೋತ್ಸವ ಸಂಘ ಮತ್ತು ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಮಕ್ಕಳಿಗಾಗಿ ಈಜು ತರಬೇತಿಯನ್ನು ರಾಷ್ಟ್ರ ಮಟ್ಟದ ತರಬೇತು ದಾರರಿಂದ ನೀಡಲು ಅನುವಾಗಿದ್ದಾರೆ,
ಎ.16 ರಿಂದ ಎ.22 ರ ವರೆಗೆ ನಿರಂತರವಾಗಿ ಪೆರಾಜೆ ಗ್ರಾಮದ ಸುಂದರ ಪರಿಸರದಲ್ಲಿ ಪಯಸ್ವಿನಿ ನದಿಯ ಒಡಲಲ್ಲಿ (ಕಾವೇರಿ ರಸ್ತೆ) ಈಜು ತರಬೇತಿ ನೀಡುವ ವ್ಯವಸ್ಥೆಯನ್ನು , ಸಮಯ 11 ಗಂಟೆಯಿಂದ 12.30 ರವರೆಗೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗೆ 9448409564. 9448768830.
8762195187. 9481765138.ಸಂಪರ್ಕಿಸಬಹುದಾಗಿದೆ
