ಕೆವಿಜಿ ಪಾಲಿಟೆಕ್ನಿಕ್ : “ಸಿವಿಲ್ ಇಂಜಿನಿಯರಿಂಗ್ ತಂತ್ರಾಂಶಗಳು” ಉಪನ್ಯಾಸ

ಕೆವಿಜಿ ಪಾಲಿಟೆಕ್ನಿಕ್ : “ಸಿವಿಲ್ ಇಂಜಿನಿಯರಿಂಗ್ ತಂತ್ರಾಂಶಗಳು” ಉಪನ್ಯಾಸ

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ವತಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಳಸುವ ವಿವಿಧ ತಂತ್ರಾಂಶಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಕ್ಯಾಡ್ ಸೆಂಟರ್ ನ ಮ್ಯಾನೇಜರ್ ಜಿತೇಶ್ ರೈ ಹಾಗೂ ಕ್ಯಾಡ್ ಇಂಜಿನಿಯರ್ ಸುಶ್ಮಿತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಮ್. ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ.ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ, ವಿದ್ಯಾರ್ಥಿ ಆಪ್ತ ಸಮಾಲೋಚಕ ರಂಗಸ್ವಾಮಿ ಹಾಗೂ ಅಸೋಸಿಯೇಸನ್ ಸಲಹೆಗಾರ ರವಿ ಎಂ.ಆರ್ ಉಪಸ್ಥಿತರಿದ್ದರು. ಕು. ಸುಶ್ಮಿತಾ ಸ್ವಾಗತಿಸಿ, ಕು. ಅರ್ಪಿತಾ ವಂದಿಸಿದರು. ಧನುಷ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ