
ಕೊಕ್ಕಡ: ಮಾ.25ರಂದು ಕೊಕ್ಕಡ ಗ್ರಾಮದ ಶಬರಾಡಿಯಲ್ಲಿ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದ ದನ ಕಳವುಗೊಂಡಿರುವ ಘಟನೆ ನಡೆದಿದೆ.

ಶಿವಪ್ರಸಾದ್, ಎಂಬುವರ ದೂರಿನಂತೆ ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿರುವ ತನ್ನ ತೋಟದಲ್ಲಿ ಮಾ 25 ರಂದು ಬೆಳ್ಳಗೆ ದನವನ್ನು ಕಟ್ಟಿ ಹಾಕಿದ್ದು ಬಳಿಕ ಮದ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು ಕಟ್ಟಿ ಹಾಕಿದ್ದಲ್ಲಿ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಶಿವಪ್ರಸಾದ್ ಮತ್ತು ಮನೆಯವರು ಹುಡುಕಾಡಿದ್ದು ಇದುವರೆಗೆ ದನವು ಎಲ್ಲೂ ಪತ್ತೆಯಾಗದೇ ಇರುವುದಾಗಿದೆ. ಕಳವಾದ ದನದ ಅಂದಾಜು ಮೌಲ್ಯ ರೂ 20,000/- ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 21/2024 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
