ಕುಟ್ಟ ಚೆಕ್ ಪೋಸ್ಟ್ ನಲ್ಲಿ ನಗದು ವಶ

ಕುಟ್ಟ ಚೆಕ್ ಪೋಸ್ಟ್ ನಲ್ಲಿ ನಗದು ವಶ

ಕೇರಳ ಮಾನಂದವಾಡಿಯಿಂದ ಕರ್ನಾಟಕದ ಕಡೆಗೆ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5ಲಕ್ಷ ರೂ.ಗಳನ್ನು ಕುಟ್ಟ ಚೆಕ್ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೊಡಗು-ಮೈಸೂರು ಗಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿಗಳು ಕೇರಳದ ಕಡೆಯಿಂದ ಬಂದ ಕಾರನ್ನು ಪರಿಶೀಲನೆ ನಡೆಸಿದ ಸಂದರ್ಭ ಕೇರಳ ವೈನಾಡು ಜಿಲ್ಲೆಯ ಮಾನಂದವಾಡಿ ನಿವಾಸಿ ನಾಸಿರ್(58) ಎಂಬುವವರು ಯಾವುದೇ ದಾಖಲೆಗಳಿಲ್ಲದೆ ಒಟ್ಟು 5 ಲಕ್ಷ ರೂ.ಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.ಕಾರಿನಲ್ಲಿದ್ದ ನಾಸಿರ್‌ ಅವರು ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನೀಡದಿರುವ ಹಿನ್ನೆಲೆ ಚುನಾವಣಾಧಿಕಾರಿಗಳು 5ಲಕ್ಷ ರೂ.ಗಳನ್ನು ವಶಕ್ಕೆ ಪಡೆದರು. ಬಳಿಕ ಮುಂದಿನ ಕ್ರಮಕ್ಕಾಗಿ ಹಣವನ್ನು ಸ್ಟ್ರೀನಿಂಗ್ ಕಮಿಟಿಗೆ ಹಸ್ತಾಂತರಿಸಿದರು.ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಕುಟ್ಟ ಪೊಲೀಸ್‌ ಠಾಣೆಯ ಸಹಾಯಕ ನಿರೀಕ್ಷಕ ಫ್ರಾನ್ಸಿಸ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ಮಂಜು, ಅಬಕಾರಿ ಇಲಾಖೆ ಉಪನಿರೀಕ್ಷಕ ವಿ.ಸುರೇಂದ್ರ, ಶಿಕ್ಷಕ ಧರ್ಮಲಿಂಗ ಅವರುಗಳ ತಂಡ ಕಾರ್ಯಾಚರಣೆ ನಡೆಸಿತು.

ರಾಜ್ಯ