ಬಂಟ್ವಾಳ: ಗುಡ್ಡವೊಂದಕ್ಕೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ಬಂಟ್ವಾಳ: ಗುಡ್ಡವೊಂದಕ್ಕೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ಬಂಟ್ವಾಳ ತಾಲ್ಲೂಕು ಮಂಚಿ ಎಂಬಲ್ಲಿ ಗುಡ್ಡವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ‌ನಂದಿಸುವಲ್ಲಿ ಯಶಸ್ವಿಯಾದರೆ.

ಗುಡ್ಡದ ಸಮೀಪದಲ್ಲಿ ರಬ್ಬರ್ ತೋಟ ಇದ್ದು, ಬೆಂಕಿಯ ತೀವ್ರತೆಗೆ ರಬ್ಬರ್ ಕೃಷಿ ನಾಶವಾಗುವ ಸಾಧ್ಯತೆಗಳಿವೆ ಎಂದು ತೋಟದ ಮಾಲಕ ಅಗ್ನಿ ಶಾಮಕದಳದ ಕಚೇರಿಗೆ ಮಾಹಿತಿ ನೀಡಿದ್ದರು.ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದು ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ