ಮುಸುಕು ಹಾಕಿ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಷಟರ್ ನ ಬೀಗ ಮುರಿದ ಕಳ್ಳ

ಮುಸುಕು ಹಾಕಿ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಷಟರ್ ನ ಬೀಗ ಮುರಿದ ಕಳ್ಳ

ಉಪ್ಪಿನಂಗಡಿಯ ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ. 20ರಂದು ಬೆಳಕಿಗೆ ಬಂದಿದೆ.

ಮಾ. 19ರ ಸಂಜೆ ಸಂಘದ ಕಚೇರಿಯನ್ನು ಬಂದ್‌ ಮಾಡಿ ಸಿಬಂದಿ ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದು ಬೆಳಕಿಗೆ ಬಂದಿದೆ. ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದು ಸುಮಾರು ಒಂದೂವರೆ ಸಾವಿರ ರೂ. ಎಗರಿಸಿ, ಪರಾರಿಯಾಗಿದ್ದಾನೆ. ಸ್ಥಳೀಯ ಮನೆಯೊಂದರಿಂದ ಪಿಕ್ಕಾಸನ್ನು ತಂದು ಷಟರ್‌ನ ಬೀಗ ಮುರಿಯಲು ಬಳಸಿದ್ದ ಎಂದು ತಿಳಿದು ಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ ಈತನ ಚಲನವಲನಗಳು ಸಂಘದ ಸಿಸಿ ಕೆಮರಾದಲ್ಲಿ ಪತ್ತೆಯಾಗಿವೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ರಾಜ್ಯ