ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧತೆ ಒಟ್ಟು 2,07, 207 ಮತದಾರರು ಹೊಸ  ನೋಂದಣಿಗೆ ಇನ್ನೂ ಇದೆ ಅವಕಾಶ.

ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧತೆ ಒಟ್ಟು 2,07, 207 ಮತದಾರರು ಹೊಸ ನೋಂದಣಿಗೆ ಇನ್ನೂ ಇದೆ ಅವಕಾಶ.

ದೇಶದಲ್ಲಿ ಲೋಕಸಭಾ ಮಹಾಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು,ಕರ್ನಾಟಕ ರಾಜ್ಯದಲ್ಲಿ ಎ. 26 ಮತ್ತು ಮೇ.07ರಂದು ಚುನಾವಣೆ ನಡೆಯಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎ.26ರಂದು ಚುನಾಚಣೆ ನಡೆಯಲಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಪಕಾರ್ಯದರ್ಶಿ ಡಾ.ಜಗದೀಶ್ ನಾಯ್ಕ್ ರವರು ಇಂದು ಮಾಧ್ಯಮಗಳೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಸಿದ್ಧತೆಯ ವಿವರಣೆ ನೀಡಿದರು.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,07,207 ಮತದಾರರಿದ್ದು 1,02,214 ಪುರುಷ ಮತದಾರರು ಹಾಗೂ 1,04,993 ಮಹಿಳಾ ಮತದಾರರಿದ್ದಾರೆ. 233 ಮತಗಟ್ಟೆಗಳು ಈ ಕ್ಷೇತ್ರದಲ್ಲಿದೆ. ಚುನಾವಣೇಗೆ ಸಂಬಂಧಪಟ್ಟಂತೆ ಪೂರ್ಣ ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ಹೇಳಿದರು.ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರೂ ಸಹಕಾರ ನೀಡಬೇಕು ಎಂದವರು ಮನವಿ ಮಾಡಿಕೊಂಡರು.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟು ಫ್ಲೈಯಿಂಗ್ ಸ್ಕ್ವಾಡ್ ಟೀಮ್, ಸ್ಟಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್ ಕಾರ್ಯಕ್ರಮಗಳ ಮೇಲೆ ನಿಗಾವಹಿಸಲಿವೆ. ಸಿವಿಜಿಲ್ ಆಪ್ ಮೂಲಕ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಸಾರ್ವಜನಿಕರಿಗೆ ದೂರು ನೀಡಬಹುದು. ದೂರು ನೀಡುವವರ ವಿವರವನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 1,932 ಮಂದಿ 80 ಪ್ರಾಯ ದಾಟಿದ ಮತದಾರರು ಮತ್ತು 2000ದಷ್ಟು ಪಿಡಬ್ಯೂಡಿ ಮತದಾರರಿದ್ದಾರೆ. ಇವರಿಗೆಲ್ಲ ಮನೆಗಳಲ್ಲಿಯೇ ಮತದಾನ ಮಾಡುವ ಅವಕಾಶವೂ ಇದೆ ಎಂದು ಸಹಾಯಕ ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ 4000 ದಷ್ಟು ಯುವ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾ.24ರವರೆಗೆ ಅವಕಾಶವಿದೆ ಎಂದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ 5 ಕಡೆ ಚೆಕ್‌ ಪೋಸ್ಟ್ ಸ್ಥಾಪಿಸಲಾಗಿದೆ. ಈ ಪೈಕಿ 2 ಅಂತರ್‌ಜಿಲ್ಲಾ ಚೆಕ್‌ಪೋಸ್ಟ್‌ಗಳು ಮತ್ತು 3 ಅಂತರ್‌ರಾಜ್ಯ ಚೆಕ್‌ಪೋಸ್ಟ್‌ಗಳು. ಈ ಪೈಕಿ 2 ಚೆಕ್‌ಪೋಸ್ಟ್ ಅನ್ನು ಕೇರಳ ರಾಜ್ಯ ಪೊಲೀಸರು ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.ಮತದಾನ ಪ್ರಮಾಣ ಜಾಸ್ತಿ ಮಾಡಲು ಪೂರಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 3 ಹಂತದಲ್ಲಿ ತರಬೇತಿ ನಡೆಯಲಿದೆ ಎಂದು ಡಾ.ಜಗದೀಶ್ ಮಾಹಿತಿ ನೀಡಿದರು.ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಕಡಬ ತಹಶೀಲ್ದಾರ್ ಪ್ರಭಾಕರ ಕಜೋರೆ, ಸುಳ್ಯ ವೃತ್ತನಿರೀಕ್ಷಕ ಸತ್ಯನಾರಾಯಣ ಕೆ. ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ