ಕಲ್ಮಕಾರು: ಕಾಮಗಾರಿ ವೇಳೆ ಸುರಂಗ ಮಾದರಿ ಪತ್ತೆ: ಹಿಂದಿನ ಕಾಲದ ಅಡಗು ತಾಣವಾಗಿರುವ ಶಂಕೆ!

ಕಲ್ಮಕಾರು: ಕಾಮಗಾರಿ ವೇಳೆ ಸುರಂಗ ಮಾದರಿ ಪತ್ತೆ: ಹಿಂದಿನ ಕಾಲದ ಅಡಗು ತಾಣವಾಗಿರುವ ಶಂಕೆ!

ಸುಳ್ಯ: ಕಲ್ಮಕಾರಿನಲ್ಲಿ ಜೆಸಿಬಿ ಮೂಲಕ ಭೂಮಿ ಅಗೆಯುತ್ತಿರುವ ವೇಳೆ ಸುರಂಗ ಮಾದರಿಯ ಗುಹೆ ಪತ್ತೆಯಾಗಿದೆ.

ಬಿಳಿಮಲೆ ಉಮೇಶ್‌ ಅವರಿಗೆ ಸೇರಿದ ಜಮೀನಿನ ರಬ್ಬರ್‌ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಇದು ಪತ್ತೆಯಾಗಿದೆ.ಉಮೇಶ್‌ ರಬ್ಬರ್‌ ತೋಟದಲ್ಲಿ ಅರಣ್ಯ ಕೃಷಿ ಉದ್ದೇಶದಿಂದ ಜೆಸಿಬಿಯಲ್ಲಿ ಮಣ್ಣು ತೆಗೆಯುವ ಆರಂಭಿಸಿದ್ದರು. ಪೊದೆ, ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಅಡಿ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ಬಳಸಲು ಇದನ್ನು ನಿರ್ಮಿಸಿರಬಹುದು ಎಂದು ಶಂಕಿಸಲಾಗಿದೆ.

ರಾಜ್ಯ