
ಬಂಟ್ವಾಳ: ಬಿ.ಸಿ. ರೋಡಿನ ಗೂಡಿನಬಳಿಯ ಚಿಕ್ಕಯಮಠ ಭಾಗದಲ್ಲಿ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದು ಸಣ್ಣ ಪುಟ್ಟ ಗಿಡ ಮರಗಳ ಜತೆಗೆ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ನಡೆದಿದೆ.

ಬೆಂಕಿ ಬಿದ್ದಿರುವ ಕುರಿತು ಬಂಟ್ವಾಳ ಕಂದಾಯ ಇಲಾಖೆಗೆ ಕರೆ ಬಂದಿದ್ದು, ಅವರು ನೀಡಿದ ಮಾಹಿತಿಯಂತೆ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.ಅಗ್ನಿ ಶಾಮಕ ದಳ ಬಂಟ್ವಾಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.ಕಂದಾಯ ಇಲಾಖೆಯ ಕರಿಬಸಪ್ಪ ನಾಯಕ್, ಸಿಬಂದಿ ಸದಾಶಿವ ಕೈಕಂಬ ಸಹಕರಿಸಿದರು. ಸ್ಥಳೀಯವಾಗಿ ಅನೇಕ ಮನೆಗಳಿದ್ದರೂ ಯಾವುದೇ ಹಾನಿ ಉಂಟಾಗಿಲ್ಲ.
