ಉಪ್ಪಿನಂಗಡಿ : ಶಾಲೆಯ ಬೀಗ ಒಡೆದು ಕಳ್ಳರ ಕೈ ಚಳಕ; ಕಪಾಟಿನಲ್ಲಿದ್ದ ದುಡ್ಡು ದೋಚಿದ ಖದೀಮರು

ಉಪ್ಪಿನಂಗಡಿ : ಶಾಲೆಯ ಬೀಗ ಒಡೆದು ಕಳ್ಳರ ಕೈ ಚಳಕ; ಕಪಾಟಿನಲ್ಲಿದ್ದ ದುಡ್ಡು ದೋಚಿದ ಖದೀಮರು

ಉಪ್ಪಿನಂಗಡಿ : ಶಾಲೆ ಎಂದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಕೇಂದ್ರವಾಗಿದ್ದು, ಅಲ್ಲಿ ಪುಸ್ತಕ ಹೊರತು ಪಡಿಸಿದ್ರೆ ಬೇರೆನೂ ಇರೋದಿಲ್ಲ. ಆದ್ರೆ ಕಳ್ಳರಿಗೆ ಅಂಗಡಿ, ಮನೆ, ಶಾಲೆ ಅನ್ನೋ ವ್ಯತ್ಯಾಸವೇ ಇರೋದಿಲ್ಲ ಅನ್ನೋದಿಕ್ಕೆ ಶಾಲೆಯಲ್ಲಿ ನಡೆದಿರುವ ಕಳ್ಳತನವೊಂದು ಸಾಕ್ಷಿಯಾಗಿದೆ.

ನಿನ್ನೆ ರಾತ್ರಿ ಶಾಲೆಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.ಶಾಲೆಯ ಬೀಗ ಮುರಿದು ನುಗ್ಗಿದ ಕಳ್ಳರು ಒಳಗಿದ್ದ ಕಪಾಟು ಒಡೆದು ಅಲ್ಲಿ ಸಿಕ್ಕ 1500 ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ.

ಇಂದು ಶಾಲೆಗೆ ಬಂದ ಮುಖ್ಯೋಪಾಧ್ಯಾಯಿನಿ ಶಾಲೆಯ ಬೀಗ ಒಡೆದಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯ ಪುಡಿ ಕಳ್ಳರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯ