ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಸುವರ್ಣ ಸಂಭ್ರಮ: 

ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಸುವರ್ಣ ಸಂಭ್ರಮ: 

ರೈತರ ಬದುಕು ದ್ವಂದತೆಯಲ್ಲಿ ಕೂಡಿದೆ, ಮಳೆ ಹೆಚ್ಚು ಬಂದರೂ ಕಡಿಮೆ ಯಾದರೂ ಕಷ್ಟವನ್ನು ಅನುಭವಿಸುವವರು ರೈತರೇ ಆಗಿದ್ದಾರೆ.ಇಂತ ಕ್ಲಿಸ್ಟಕರವಾಗಿ ಬದುಕುತ್ತಿರುವ ರೈತರ ನೆರವಿಗೆ ಆಗ್ರೋ ಸಂಸ್ಥೆ ನಿಂತು ಐವತ್ತು ವರುಷ ಪೂರೈಸಿರುವುದು ನಿಜಕ್ಕೂ ಅಭಿನಂದನೀಯ, ನಾನು ಸ್ವತಹ ಕೃಷಿ ಕೆಲಸ ಮಾಡಿದ ಅನುಭವವಿದೆ , ಸುಳ್ಯದಂತ ಪ್ರದೇಶದಲ್ಲಿ 50 ವರ್ಷ ಸಂಸ್ಥೆ ಮುನ್ನಡೆಸುವುದು ಸುಲಭವಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯ ಪಟ್ಟಿದ್ದಾರೆ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಸುವರ್ಣ ಮಹೋತ್ಸವ ಸಂಭ್ರಮ ‘ಆಗ್ರೋ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಐವತ್ತು ವರ್ಷದ ಆಗ್ರೋ ಸಾಧನೆಯ ಅವಲೋಕನ ಮಾಡಿದ ಲಯನ್ಸ್‌ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮಾತನಾಡಿ ,ಆಗ್ರೋ ಸಂಸ್ಥೆ  ಐವರು ಕೃಷಿ ಸಾಧಕರನ್ನು ಸನ್ಮಾನಿಸುವುದರ ಜೊತೆಗೆ ಯುವ ಕೃಷಿಕರನ್ನು ಕರೆಸಿ ಆಗ್ರೋ ಕೃಷಿ ಚಿಂತನ ಗೋಷ್ಠಿ ನಡೆಸುವ ಮೂಲಕ ಸಮಾಜಕೆ  ಸಂದೇಶ ಕೊಡುವ ಕೆಲಸ ಮಾಡಿದೆ.ಮತ್ತು ರೈತರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದೆ,ರೈತರು ಸ್ವಾವಲಂಭಿ ಬದುಕು ನಡೆಸಲು ಪ್ರೇರೇಪಣೆ ನೀಡಿದೆ,ಎಂದು ಹೇಳಿದರು . ಇವರು ಸ್ವತ್ಹ ಅನ್ವೇಶಿಸಿ ನಡೆಸಿದ ಸ್ಪ್ರಿಂಕ್ಲರ್‌ಗಳ  ಪ್ರಯೋಗದಿಂದ  ತೋಟಕ್ಕೆ ನೀರಾವರಿಗೆ ಹೊಸ ರಹದಾರಿ  ಹುಡುಕಿ ಕೊಟ್ಟರು ,ಇವರು ಸ್ನೇಹ, ಪ್ರೀತಿ, ವಿಶ್ವಾಸವನ್ನು ಉಳಿಸಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು‌.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರೀನ್ ಹೀರೋ ಇಂಡಿಯ ಖ್ಯಾತಿಯ ಡಾ. ಆರ್ ಕೆ ನಾಯರ್  ರೋಟರಿ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಿದ್ದರು. ಸಾಧಕರಾದ

ಪದಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್, ಗ್ರೀನ್ ಗೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್, ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾಪಲತೋಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ. ಗೌರಿ ಶಂಕರ್ ಹಾಗೂ ಹಿರಿಯ ಕೃಷಿಕರಾದ ಸಂಪಾಜೆಯ ಶಂಕರ್ ಪ್ರಸಾದ್ ರೈ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ,ರೋಟರಿ ಸಿಟಿ,ಕೆವಿಜಿ ಲಯನ್ಸ್, ಇನ್ನರ್‌ವೀಲ್ ಕ್ಲಬ್, ಫಿನೋಲೆಕ್ಸ್ ಕಂಪೆನಿ , ಸಂದ್ಯಾ ಚೇತನ ಹಿರಿಯನಾಗರೀಕರು, ವರ್ತಕ ಸಂಘ,ಆ್ಯಸ್ಪಿ ಹಾಗೂ ಎಸ್ ವಿ ರಂಗಸ್ವಾಮಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಗ್ರೋ ರಾಮಚಂದ್ರ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಮಾಲಕರಾದ ರಾಮಚಂದ್ರ ಪಿ., ಮಂಜುಳಾ ರಾಮಚಂದ್ರ, ಸನತ್.ಪಿ.ಆರ್, ದಿವ್ಯ ಸನತ್, ಸಿದ್ಧಾರ್ಥ್, ಸನಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾಮಚಂದ್ರ.ಪಿ ಸ್ವಾಗತಿಸಿ, ಸನತ್ ಪಿ.ಆರ್ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ.

ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಸಂಯೋಜನೆಯಲ್ಲಿ

ಉಜಿರೆ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆಯ 160 ಮಂದಿ ಕಲಾವಿದರು ಪ್ರಸ್ತುತಿಪಡಿಸಿದ ಸಾಂಸ್ಕೃತಿಕ ಕಲಾ ಸಂಭ್ರಮ  ಪ್ರೇಕ್ಷಕರನ್ನು ರಂಜಿಸಿತು. ಕೇರಳದ ಮೋಹಿನಿಯಾಟ್ಟಂ, ಗುಜರಾತ್ ನ ದಾಂಡಿಯಾ- ಗರ್ಭ ನೃತ್ಯ ಒರಿಸ್ಸಾದ ಒಡಿಸ್ಸಿ, ಕರಾವಳಿಯ ಯಕ್ಷಗಾನ ಬ್ಯಾಲೆಟ್, ಭರತನಾಟ್ಯ ಶಿವತಾಂಡವ ರೂಪಕ, ಸ್ಪಾನಿಶ್ ಪ್ಲೆಮೆಂಕೋ ಕ್ರಿಯೇಟಿವ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್ ಕೇರಳದ ತೆಯ್ಯಂ ಆಧಾರಿತ ನರಸಿಂಹಾವತಾರ, ಶ್ರೀರಾಮ ಪಟ್ಟಾಭಿಷೇಕ ವಿಶೇಷ ನೃತ್ಯ ರೂಪ ಸೇರಿದಂತೆ ವಿನೂತನ ವೈವಿಧ್ಯಮಯ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಿತು.ಕಿಕ್ಕಿರಿರು ಸಂಖ್ಯೆಯಲ್ಲಿ ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಣೆಮಾಡುವುದರ ಮೂಲಕ ರಾಮಚಂದ್ರ .ಪಿ ಮತ್ತು ಕುಟುಂಭಸ್ಥರ ಸಂಭ್ರಮದಲ್ಲಿ ಭಾಗಿಯಾದರು.

ರಾಜ್ಯ