ಮೇನಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ  ಸಂಪನ್ನ : ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮ :ಅಭೂತ ಪೂರ್ವ ಕ್ಷಣಕ್ಕೆ  ಸಾಕ್ಷಿಯಾದ ಕರ್ನಾಟಕ  ಮತ್ತು ಕೇರಳ ರಾಜ್ಯದ ಸಾವಿರಾರು ಭಕ್ತರು.

ಮೇನಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ  ಸಂಪನ್ನ : ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮ :ಅಭೂತ ಪೂರ್ವ ಕ್ಷಣಕ್ಕೆ  ಸಾಕ್ಷಿಯಾದ ಕರ್ನಾಟಕ  ಮತ್ತು ಕೇರಳ ರಾಜ್ಯದ ಸಾವಿರಾರು ಭಕ್ತರು.

 

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ

ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಇಂದು ಸಂಪನ್ನಗೊಂಡಿತು., ಸಂಸದ ನಳೀನ್ ಕುಮಾರ್ ಕಟೀಲ್ ,ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸೇರಿದಂತೆ ಅನೇಕ ರಾಜಕೀಯ, ಸಾಮಾಜಿಕ ನಾಯಕರು ಪಾಲ್ಗೊಂಡು ದೈವ ಕೃಪೆಗೆ ಪಾತ್ರರಾದರು.

ನೂರಾರು ವರುಷಗಳ ಬಳಿಕ ಇದೇ ಮೊದಲ  ಬಾರಿಗೆ ಮೇನಾಲದಲ್ಲಿ ಮಾ.5ರಿಂದ ಆರಂಭಗೊಂಡುಮಾ7 ರವರೆಗೆ  ಮೂರು ದಿನಗಳ ಕಾಲ ಬಹಳ ಅದ್ದೂರಿಯಿಂದ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆ , ಹಾಗೂ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ಕೇರಳದಿಂದ ಸಾವಿರಾರು ಭಕ್ತರು ಆಗಮಿಸಿ ಉತ್ಸವಕ್ಕೆ ಸಾಕ್ಷಿಯಾದರು.

ಇಂದು ಬೆಳಗ್ಗಿನಿಂದ ಕೊರಚ್ಛನ್ ದೈವ,  ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಬಳಿಕ ದೈವಕ್ಕೆ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮ  ನಡೆಯಿತು, ಇದು ವಯನಾಟ್ ದೈವಕಟ್ಟು ಮಹೋತ್ಸವದ ವಿಶೇಷತೆಯಲ್ಲೊಂದು,. ರಾತ್ರಿ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಿ ಮರ ಪಿಳರ್ಕಲ್ ನಡೆಯುತು. ಕೈವೀದ್‌ನೊಂದಿಗೆ ಉತ್ಸವ ಸಂಪನ್ನವಾಯಿತು.ಆಗಮಿಸಿದ ಎಲ್ಲಾ ಭಕ್ತರಿಗೆ ಮೂರೂ ದಿವಸವು ಅನ್ನದಾನ ಸಮರ್ಪಣೆ ಮಾಡಲಾಯಿತು.

ಮಹೋತ್ಸವ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ,ಶ್ರೀಕ್ಷೇತ್ರ ಕುತ್ತಿಕೊಲು ಅಧ್ಯಕ್ಷ ಆರ್.ಕುಂಞಿಕಣ್ಣನ್, ಮಹೋತ್ಸವ ಸಮಿತಿಯಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ರೈ ಮೇನಾಲ, ಜಗನ್ನಾಥ ರೈ ಮೇನಾಲ ಮುಂಬೈ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಸ್ಥಾನದ ಮನೆ ಅರ್ಚಕರಾದ ಯಂ.ಕೆ.ಕೃಷ್ಣ, ಪದಾಧಿಕಾರಿಗಳು, ಸಂಚಾಲಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಹೋತ್ಸವ ಸಮಿತಿ, ಉಪಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಮೇನಾಲ ಕುಟುಂಬಸ್ಥರು ಮತ್ತು ಊರ ಪ್ರಮುಖರು ಭಕ್ತರನ್ನು ಸ್ವಾಗತಿಸಿದರು, 

ರಾಜ್ಯ