

ಕೊಡಗು ಜಿಲ್ಲೆಯ ಗಡಿಗ್ರಾಮವಾದ ಪೆರಾಜೆ, ಸುಳ್ಯ ನಗರಕ್ಕೆ ಅನತಿ ದೂರದಲ್ಲಿದ್ದರು ಬೌಗೋಳಿಕವಾಗಿ ಕೊಡಗು ಭೂ ಪ್ರದೇಶವಾದ ಕಾರಣ, ವ್ಯವಹಾರಿಕವಾಗಿ ಗ್ರಾಮಸ್ಥರು ಪ್ರತಿ ಬಾರಿ ಮಡಿಕೇರಿ ಅಥವಾ ಸಂಪಾಜೆಗೆ ತೆರಳಬೇಕಾಗಿರುವ ಹಿನ್ನಲೆ , ಗ್ರಾಮಸ್ಥರು ಮಡಿಕೇರಿಗೆ ಹೋಗುವ ಸಂದರ್ಭದಲ್ಲಿ ವೇಗದೂತ ಬಸ್ಸುಗಳು ಪೆರಾಜೆಯಲ್ಲಿ ನಿಲ್ಲಿಸದೆ ಮುಂದೆ ತೆರಳುವ ಕಾರಣ ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದರು, ಹಾಗೂ ಮಡಿಕೇರಿಯಿಂದ ಬರುವಾಗಲು ಸುಳ್ಯಕ್ಕೆ ಟಿಕೆಟ್ ಪಡೆದು ಹೆಚ್ಚು ಹಣ ಪಾವತಿಮಾಡಿ ಪೆರಾಜೆಯಲ್ಲಿ ಇಳಿಯಬೇಕಾದ ಅನಿವಾರ್ಯತೆ ಇತ್ತು,


ಆದರೆ ಇತ್ತಿಚೆಗೆ ರಾಜ್ಯ ಸರಕಾರದ ಆದೇಶದಂತೆ ರಾಜ್ಯದ ಪ್ರತೀ ಜೆಲ್ಲೆಯ ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಸಂಘಟಿಸಿ ಜನರ ಬಳಿಗೇ ಅಧಿಕಾರಿಗಳು , ಮತ್ತು ಜನಪ್ರತಿನಿಧಿಗಳು ತೆರಳಿ ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳು ಆದೇಶಮಾಡಿದ್ದರು ಅಂತೆಯೇ ಕಳೆದ ತಿಂಗಳು ಜನತಾದರ್ಶನ ಕಾರ್ಯಕ್ರಮ ಏರ್ಪಡಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಶಾಸಕರಾಧಿಯಾಗಿ ಅಧಿಕಾರಿಗಳು ಆಲಿಸಿದ್ದರು, ಈ ಸಂದರ್ಭ ನಾಪೊಕ್ಲು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ ಹಾಗೂ, ಸ್ಥಳೀಯ ಚಿಗುರು ಯುವಕ ಮಂಡಲ ಪೆರಾಜೆಯಲ್ಲಿ ವೇಗದೂತ ಬಸ್ ಗಳನ್ನು ನಿಲುಗಡೆಗೊಳಿಸಿ ಆದೇಶ ಮಾಡುವಂತೆ ಶಾಸಕರಿಗೆ ವಿನಂತಿಸಿಕೊಂಡಿದ್ದರು,ಇದಕ್ಕೆ ಅಧಿಕಾರಿಗಳು ಸ್ಫಂದಿಸಿ ಪತ್ರ ರವಾನಿಸಿದ್ದರು.
ಆದರೂ ಕೆಲವು ಬಸ್ಸುಗಳು ಪೆರಾಜೆಯಲ್ಲಿ ಪ್ರಯಾಣಿಕರಿಗೆ ಸ್ಪಂದನೆ ನೀಡುತಿರಲಿಲ್ಲ, ಇದರಿಂದ ಮನು ಪೆರುಮುಂಡ ಮತ್ತೆ ಶಾಸಕರ ಗಮನಕ್ಕೆ ತಂದಿದ್ದರು. ಈ ಮನವಿಗೆ ಸ್ಫಂದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಶೀಘ್ರ ಸ್ಪಂಧನೆಮಾಡಿ ಪೆರಾಜೆಯಲ್ಲಿ ವೇಗದೂತ ಬಸ್ ಗಳನ್ನು ನಿಲುಗಡೆ ಗೊಳಿಸುವಂತೆ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದರು, ಅಂತೆಯೇ ಇದೀಗ ಪೆರಾಜೆಯಲ್ಲಿ ಎಲ್ಲಾ ವೇಗದೂತ ಬಸ್ಸುಗಳು ಇಂದಿನಿಂದಲೇ ನಿಲುಗಡೆಗೊಳ್ಳಲ್ಲಿದೆ ಎಂದು ತಿಳಿದು ಬಂದಿದೆ.
