
ಎರಡು ಬೈಕ್ ಗಳು ಓವರ್ ಟೇಕ್ ಮಾಡುವ ಯತ್ನದಲ್ಲಿ ಪರಸ್ಪರ ಅಪಘಾತ ಸಂಭವಿಸಿ, ದಂಪತಿ ಸೇರಿದಂತೆ ಮೂವರು ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಮಸೀದಿಯ ಬಳಿ ಮಾ ಸಂಭವಿಸಿದೆ.

ಮಡಿಕೇರಿಯಿಂದ ಸುಳ್ಯದ ಕಡೆಗೆ ಬರುತ್ತಿದ್ದು ಬೈಕ್ ಗಳು ಓವರ್ ಟೇಕ್ ಮಾಡುವ ಯತ್ನದಲ್ಲಿ ಬೈಕ್ – ಬೈಕ್ ಢಿಕ್ಕಿ ಹೊಡೆದುಕೊಂಡಿದ್ದು, ಒಂದು ಬೈಕಿನಲ್ಲಿದ್ದ ದಂಪತಿ ಸೇರಿದಂತೆ ಮೂವರಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಮಿಥುನ್ ಬಂಟೋಡಿ ಎಂಬ ಯುವಕನ ಕಾಲು ಮುರಿತಗೊಂಡಿರುವುದಾಗಿ ತಿಳಿದುಬಂದಿದೆ. ಅವರ ಪುತ್ರಿಗೂ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.