ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ವಾಹನ ತಡ ರಾತ್ರಿ ಕೊಕ್ಕಡ ಬಳಿ ಪಲ್ಟಿ

ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ವಾಹನ ತಡ ರಾತ್ರಿ ಕೊಕ್ಕಡ ಬಳಿ ಪಲ್ಟಿ

ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಾಹನದಲ್ಲಿ ಅಧಿಕಾರಿಗಳು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಕೊಕ್ಕಡ ಸಮೀಪದ ಪಟ್ಲಡ್ಕದಲ್ಲಿ ನಡೆದಿದೆ.

ಘಟನೆಯು ಫೆ.23 ರಂದು ನಡೆದಿದ್ದು ರಾತ್ರಿ ಹೊತ್ತು ಮಧ್ಯ ಸೇವಿಸಿ ಇಲಾಖೆಯ ವಾಹನವನ್ನು ಚಲಾಯಿಸುತ್ತಿರುವುದಾಗಿ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.ವಾಹನ ಬಿದ್ದ ವಿಚಾರ ತಿಳಿದು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ವಾಹನವನ್ನು ಮೇಲೆ ಎತ್ತುವ ಕಾರ್ಯಾಚರಣೆಯಲ್ಲಿ ಮಾಡಿದ್ದರು.

ಅಧಿಕಾರಿಗಳ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮಧ್ಯದ ಅಮಲಿನಲ್ಲಿ ಅಧಿಕಾರಿಗಳಿಗೆ ಎಲ್ಲಿ ಇದ್ದೇವೆ ಎಂಬುದೇ ಪರಿಜ್ಞಾನ ಇಲ್ಲದಂತಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.ವಾಹನದಲ್ಲಿ ಇಬ್ಬರು ಇದ್ದರು ಎಂದು ತಿಳಿದುಬಂದಿದೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ.

ರಾಜ್ಯ