
ಕಡಬ: ಕಡಬದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಮುಸ್ಲಿಂ ಯುವಕರನ್ನು ಮುಂದಿಟ್ಟುಕೊಂಡು ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕಡಬ ತಾಲೂಕಿನ ನೂಜಿಬಾಳ್ತಿಲದ ಭಾಸ್ಕರ ಗೌಡ ಎಂಬವರು ದೂರು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ದಿಬ್ಬದಿಂದ ಕಾನೂನು ಪ್ರಕಾರ ಮರಳು ತೆಗೆಯಬಹುದಾಗಿದೆ. ಆದರೆ ಕಡಬದ ಬಿಜೆಪಿ ಮುಖಂಡ ನಿಯಮಬಾಹಿರವಾಗಿ ಮರಳುಗಾರಿಕೆ ನಡೆಸುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳುಗಾರಿಕೆಗೆ ತಡೆ ನೀಡಲಾಗಿದ್ದು, ಇದೀಗ ದೂರು ನೀಡಿದ ಭಾಸ್ಕರ ಗೌಡರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಗಾಂಜಾ ಅಮಲಿನಲ್ಲಿರುವ ಮುಸ್ಲಿಂ ಯುವಕರನ್ನ ಬಿಟ್ಟು ಕೊಲೆ ಬೆದರಿಕೆಯೋಡ್ಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರು ರಕ್ಷಣೆ ಕೋರಿ ಪುತ್ತೂರು ಡಿವೈಎಸ್ಪಿಗೆ ದೂರು ಸಲ್ಲಿಸಿದ್ದಾರೆ.