ಧರ್ಮಸ್ಥಳ : ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

ಧರ್ಮಸ್ಥಳ : ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

ಫೆ.15ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ಇರುವ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವುಗೈದ ಪ್ರಕರಣ ವರದಿಯಾಗಿದೆ.

ಹಿಟ್ನಾಳ್ ಗ್ರಾಮ, ಕೊಪ್ಪಳ ನಿವಾಸಿ ಬಸವರಾಜ್,ಎಸ್, ಎಂಬುವರು ನೀಡಿದ ದೂರಿನಂತೆ, ಫೆ.14 ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ಇರುವ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ತನ್ನ KA-05-HJ-7954 ನೇ ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ನಿಲ್ಲಿಸಿದ್ದು, ಮರುದಿನ ಫೆ.15 ರಂದು ಬೆಳಿಗ್ಗೆ ನೋಡಿದಾಗ ಮೋಟಾರ್‌ ಸೈಕಲ್‌ ಕಾಣದಿದ್ದು, ಸದ್ರಿ ಪರಿಸರದಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಅಂದಾಜು ರೂ 150000/-ಮೌಲ್ಯದ ಸದ್ರಿ ಮೋಟರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 08/2024 ಕಲಂ: 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ರಾಜ್ಯ