ಸುಳ್ಯ ಆಲೆಟ್ಟಿಯಲ್ಲಿ ಆಟೋ ರಿಕ್ಷಾ  ಮತ್ತು  ಕಾರು ಡಿಕ್ಕಿ, ಪ್ರಯಾಣಿಕರಿಗೆ ಗಾಯ

ಸುಳ್ಯ ಆಲೆಟ್ಟಿಯಲ್ಲಿ ಆಟೋ ರಿಕ್ಷಾ ಮತ್ತು ಕಾರು ಡಿಕ್ಕಿ, ಪ್ರಯಾಣಿಕರಿಗೆ ಗಾಯ

ಸುಳ್ಯ ಆಲೆಟ್ಟಿಯ ಗುಂಡ್ಯ ಬಳಿ ಆಟೋ ರಿಕ್ಷಾ ಮತ್ತು ಕಾರು ನಡುವೆ ಅಫಘಾತ ಸಂಭವಿಸಿದ್ದು ಪ್ರಯಾಣಿಕರೊಬ್ಬರಿಗೆ ಗಾಯವಾದ ಘಟನೆ ನಡೆದಿದೆ.

ಸುಳ್ಯ ಕಡೆಯಿಂದ ಬಡ್ಡಡ್ಕ ಕಡೆಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾಕ್ಕೆ ಬಡ್ಡಡ್ಕದಿಂದ ಸುಳ್ಯಕಡೆಗೆ ಬರುತ್ತಿದ್ದ ಆಲ್ಟೋ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮಹಿಳೆಯೋರ್ವರ ಕಾಲಿಗೆ ಹಾಗೂ ಚಾಲಕನ ಕೈಗೆ ಗಾಯವಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ರಿಕ್ಷಾದ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು ಕಾರಿನ ಎದುರು ಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ