ಸಂಪಾಜೆ  ಮನೆಗೆ ನುಗ್ಗಿದ ಕಳ್ಳರ ತಂಡ:    ಚಿನ್ನಾಭರಣ ದೋಚಿ ಪರಾರಿ  : ಸ್ಥಳಕ್ಕೆ ಆಗಮಿಸಿದ ಪೋಲೀಸರು, ಬೆರಳಚ್ಚು  ತಜ್ಞರು ಹಾಗೂ ಶ್ವಾನದಳ.

ಸಂಪಾಜೆ ಮನೆಗೆ ನುಗ್ಗಿದ ಕಳ್ಳರ ತಂಡ: ಚಿನ್ನಾಭರಣ ದೋಚಿ ಪರಾರಿ : ಸ್ಥಳಕ್ಕೆ ಆಗಮಿಸಿದ ಪೋಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ.

ಫೆ.8 ರಂದು ಕೊಡಗು ಸಂಪಾಜೆಯ ಬೈಲಿನಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ಹಣ ಕಳ್ಳ ತನ ನಡೆಸಿದ ಘಟನೆ ನಡೆದಿದೆ.

ಸಂಪಾಜೆ ಬೈಲಿನ ಕನ್ಯಾನ ವಿಜಯ ಕುಮಾರ್ ಅವರ ಮನೆಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ನೋಡಿದಾಗ ಬಟ್ಟೆ ಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಲಾಗಿದ್ದು, ಸಂಪಾಜೆ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ.

40 ಗ್ರಾಂ ಚಿನ್ನಾಭರಣ ಮತ್ತು 20ಸಾವಿರ ಮೌಲ್ಯದಹಣ , ಉಂಗುರ ಕಳ್ಳ ತನವಾಗಿದೆ. ಸ್ಥಳಕ್ಕೆ ಮಡಿಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ, ಕ್ರೈಂ ಶ್ರೀನಿವಾಸಲು, ಸಿಬ್ಬಂದಿ ರಮೇಶ್, ಬಸವರಾಜ್, ಮಧು, ನಾಗರಾಜ್ ಬೆರಳಚ್ಚು ತಜ್ಞರು , ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ.

ರಾಜ್ಯ