ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ ಸಮಾರಂಭ : ಪ್ರತಿಷ್ಠಿತ ಶಾಲೆಗಳಲ್ಲಿ ದೊರೆಯದ ಸೌಲಭ್ಯ ಇಂದು ಸರಕಾರಿ ಶಾಲೆಯಲ್ಲಿ ದೊರೆಯುತ್ತಿದೆ-ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ  ಬಿ.ಇ ರಮೇಶ್

ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ ಸಮಾರಂಭ : ಪ್ರತಿಷ್ಠಿತ ಶಾಲೆಗಳಲ್ಲಿ ದೊರೆಯದ ಸೌಲಭ್ಯ ಇಂದು ಸರಕಾರಿ ಶಾಲೆಯಲ್ಲಿ ದೊರೆಯುತ್ತಿದೆ-ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ ರಮೇಶ್

ಇಂದು ಗ್ರಾಮದಲ್ಲಿರುವ ಇರುವ ಸರಕಾರಿ ಶಾಲೆಗಳಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಶಿಕ್ಷಣ ನೀಡುವ ಶಿಕ್ಷಕರಿದ್ದಾರೆ, ಪ್ರತಿಷ್ಠಿತ ಶಾಲೆಗಳಲ್ಲಿ ದೊರೆಯದ ಶಿಕ್ಷಣ ಇಂದು ಸರಕಾರಿ ಶಾಲೆಯಲ್ಲಿ ದೊರೆಯುತ್ತಿದೆ, ಆದರೂ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಕಳವಳ ವ್ಯಕ್ತ ಪಡಿಸಿದ್ದಾರೆ ಅವರು ಫೆ.8ರಂದು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಸರಕಾರಿ ಶಾಲೆಯಲ್ಲಿ 54 ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯನ್ನು ನಲಿಕಲಿ ಜೊತೆ ಕಲಿಸಲಾಗುತ್ತಿದೆ ಆದರೂ ಪೋಷಕರುಗಳಿಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶತಮಾನೋತ್ಸವದ ಅಂಗವಾಗಿ ಆರಂಭದಲ್ಲಿ ಆಕರ್ಷಕ ಮೆರವಣಿಗೆ ನಡೆಸಲಾಯಿತು .ಶಾಲೆಯ ಎಸ್.ಡಿ‌.ಎಂ.ಸಿ‌. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ ಮೆರವಣಿಗೆಗೆ ಚಾಲನೆ ನೀಡಿದರು.ನಿವೃತ್ತ ಮುಖ್ಯಗುರು ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ ಧ್ವಜಾರೋಹಣ ನೆರವೇರಿಸಿದರು.ಬಳಿಕ ನವೀಕೃತ ಶಾಲಾ ಕೊಠಡಿಗಳ ಉದ್ಘಾಟನೆ, ಶಿಕ್ಷಕರ ವಸತಿಗೃಹ, ಇಂಟಾರ್ ಲಾಕ್, ಕ್ರೀಡಾಂಗಣ ನೂತನ ರಂಗಮಂದಿರದ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರಿ ಶಾಲಾ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಸೇರಿ ಎಲ್ಲಾ ಜನಪ್ರತಿನಿಧಿಗಳು ಗೈರು ಹಾಜರಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದರು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡ ನಂತರವೇ ಆಮಂತ್ರಣದಲ್ಲಿ ಅವರ ಹೆಸರು ಹಾಕಿದ್ದೇವೆ.ಕಳೆದ ಎರಡು ದಿನಗಳಿಂದ ನಿರಂತರ ಸಂಪರ್ಕದಲ್ಲಿ ಇದ್ದೆವು ನಿನ್ನೆ ವರೆಗೆ ಬರುತ್ತೇನೆ ಎಂದು ಹೇಳಿದ ಜನಪ್ರತಿನಿಧಿಗಳು ಯಾರೊಬ್ಬರೂ ಬಾರದೇ ಇರುವುದು ಬೇಸರ ತಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ,ಉದ್ಯಮಿ ಉಮೇಶ್ ಮುಂಡೋಡಿ, ನಿವೃತ್ತ ಬಿಡಿಒ ಮೀನಾಕ್ಷಿ ಗೌಡ ಎಂ., ಗ್ರಾ.ಪಂ.ಸದಸ್ಯೆ ಸುಲೋಚನಾ ದೇವ ಭಾಗವಹಿಸಿದ್ದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ,ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ ನಿಲಯ, ಕೋಶಾಧಿಕಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ಕೆ.ಎಸ್, ಶಾಲಾ ಎಸ್.ಡಿ‌.ಎಂ.ಸಿ‌. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ, ಶತಮಾನೋತ್ಸವ ಸಮಿತಿ ಸಂಚಾಲಕ ವಿಜೇಶ್ ಹಿರಿಯಡ್ಕ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಪ್ರಧಾ‌ನ ಕಾರ್ಯದರ್ಶಿ ಪ್ರೀತಂ ಮುಂಡೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಂಗಮಂದಿರ ಕೊಡುಗೆ ನೀಡಿದ ಉಮೇಶ್ ಮುಂಡೋಡಿ, ಹಾಗೂ ಶಾಲಾ ಕೊಠಡಿ ನಿರ್ಮಾಣ ಹಾಗೂ ಇತರ ನಿರ್ಮಾಣಕ್ಕೆ ಕೊಡುಗೆ ನೀಡಿದ‌ ದಾನಿಗಳಾದ ಶೈಲೇಶ್ ಅಂಬೆಕಲ್ಲು, ಮಣಿ ಮುಂಡೋಡಿ, ನೇತ್ರಾವತಿ ಪಡ್ಡಂಭೈಲು, ಮೀನಾಕ್ಷಿ ಗೌಡ ಸುಳ್ಯ, ನರೇಂದ್ರ ಮುಂಡೋಡಿ, ಜಯರಾಮ ಗೌಡ ಕೇವಳ, ಲೀಲಾವತಿ ಜಯಪ್ರಕಾಶ್ ಊರುಬೈಲು, ಜಯರಾಮ ಗೌಡ ನೂಜಾಲು, ಬಾಲಕೃಷ್ಣ ಮಾಡಬಾಕಿಲು, ಲಯನ್ಸ್ ಜಯರಾಮ ದಂಬೆಕೋಡಿ, ಮತ್ತು ಎಂ ಡಿ ವಿಜಯಕುಮಾರ್, ಗಂಗಾತಿಲಕ ಅಂಬೆಕಲ್ ರನ್ನು ಸನ್ಮಾನಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ಕೆ.ಎಸ್ ವಂದಿಸಿದರು. ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು

ರಾಜ್ಯ