
ನಿನ್ನೆ ರಾತ್ರಿ ವಿಟ್ಲ ಸಮೀಪದ ಅಡ್ಯನಡ್ಕ ಹೃದಯ ಭಾಗದಲ್ಲಿರುವ ಕರ್ನಾಟಕ ಬ್ಯಾಂಕ್‌ಗೆ ದರೋಡೆಕೋರರು ನುಗ್ಗಿದ್ದಾರೆ. ಹಿಂದಿನ ಕಿಟಕಿಯ ಕಬ್ಬಿಣದ ರೋಡ್ ಮುರಿದು ಓಳ ನುಗ್ಗಿದ ದರೋಡೆಕೋರರು ಲೋಕರ್ ಅನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡುಮಾಡಿದ್ದಾರೆ.

ಎಷ್ಟು ಮೌಲ್ಯದ ಚಿನ್ನ ಹಾಗೂ ಹಣ ಲೂಟಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ. ಇಂದು ಮುಂಜಾನೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದು ಓಳಗೆ ಹೋದಾಗ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್.ಇ ಮತ್ತು ತಂಡ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಬರುವ ಸಾಧ್ಯತೆ ಇದೆ.
