
ಎಲ್ಲಿ ಭಜನೆಗಳು ನಡೆಯುತ್ತವೆಯೋ, ಎಲ್ಲಿ ಭಜಕರಿದ್ದಾರೊ ಅಲ್ಲಿ ಭಗವಂತನೂ ಇರುತ್ತಾನೆ, ಬೆಟ್ಟದ ಪುರ ದೇವಸ್ಥಾನಕ್ಕೆ ಇಷ್ಟೊಂದು ಮೆಟ್ಟಿಲುಗಳನ್ನು ಹತ್ತಿ ಬಂದರೂ,ಸ್ವಲ್ಪವೂ ಸುಸ್ತಾಗುತ್ತಿಲ್ಲ, ಈ ಕ್ಷೇತ್ರ ನಾನು ತಿಳಿದುಕೊಂಡಿದ್ದಕಿಂತಲೂ ಅಮೋಘವಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.


ಅವರು ಫೆ .3 ರಂದು ಪೆರಾಜೆಯ ಅಮಚೂರು ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಶ್ರೀಕ್ಷೇತ್ರದ ಧರ್ಮದರ್ಶಿ ಲೋಲಾಕ್ಷ ಬೆಟ್ಟದಪುರ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಅರಂತೂಡು ಪ್ರಾ ಕೃ ಪತ್ತಿನ ಸಹಕಾರಿಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ದಿನಕರ ಅಡ್ತಲೆ, ಸಂತೋಷ್ ತೊಡಿಕಾನ ಸೇರಿದಂತೆ ಪ್ರಮುಖರು ಉಪಸ್ತಿತರಿದ್ದರು.

ಫೆ 03 ರ ಶನಿವಾರ ಬೆಳಗ್ಗೆ ಗಂಟೆ 6-00ಕ್ಕೆ ದೀಪ ಪ್ರತಿಷ್ಠೆ ನಂತರ ಶ್ರೀ ಗುರುಗಳ ಪಾದಪೂಜೆ ನಡೆಯಿತುಬೆಳಗ್ಗೆ ಗಂ. 6-20ಕ್ಕೆ: ಶ್ರೀ ಗಣಪತಿ ಹವನ,ಶುದ್ಧಿ ಕಲಶ, ಉದಯ ಪೂಜೆ ನಡೆದು ಪೂರ್ವಾಹ್ನ 11-30ಕ್ಕೆ: ಶ್ರೀ ನಾಗಬ್ರಹ್ಮ ದೇವರಿಗೆ ಪೂಜೆ ಹಾಗೂ ನಾಗ ತಂಬಿಲಮಧ್ಯಾಹ್ನ 12-30ಕ್ಕೆ: ಮಹಾಪೂಜೆ, ದರ್ಶನಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ. ನಡೆಯಿತು.

ಸಂಜೆ 6-00ರಿಂದ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಪುತ್ಯ-ಪೆರಾಜೆ ,ಶ್ರೀ ಬಸವೇಶ್ವರ ಭಜನಾ ಸಂಘ ಕಾಂತಬೈಲು, ಶ್ರೀ ಬಸವೇಶ್ವರ ಭಜನಾ ಮಂಡಳಿ, ಕಾಂತುಬೈಲು-ದಬ್ಬಡ್ಕ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.ರಾತ್ರಿ 9 ಕ್ಕೆ: ಮಹಾಪೂಜೆ, ದರ್ಶನಬಲಿ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ರಾತ್ರಿ 12-00ರಿಂದ: ಶ್ರೀ ಅಮ್ಮನವರ ದೊಂದಿ ಸೇವೆ, ಶಕ್ತಿಪೂಜೆ ಪ್ರಸಾದ ವಿತರಣೆ, ಮಂಗಳಾ ಸೇವೆ ನಡೆಯಿತು, ನೂರಾರು ಭಕ್ತಾದಿಗಳು ಭಾಗವಹಿಸಿದ್ದರು

