ಮಂಗಳೂರಿನಲ್ಲಿ ಟ್ರ್ಯಾಪ್ ಮಾಡಿ 5 ಲ. ರೂ ಲೂಟಿ, 2 ಮಹಿಳೆಯರ ಸಹಿತ 7 ಮಂದಿಯ ಬಂಧಿಸಿದ ಕಾಸರಗೋಡು ಪೊಲೀಸರು..!

ಮಂಗಳೂರಿನಲ್ಲಿ ಟ್ರ್ಯಾಪ್ ಮಾಡಿ 5 ಲ. ರೂ ಲೂಟಿ, 2 ಮಹಿಳೆಯರ ಸಹಿತ 7 ಮಂದಿಯ ಬಂಧಿಸಿದ ಕಾಸರಗೋಡು ಪೊಲೀಸರು..!

ಕಾಸರಗೋಡು: ಮಂಗಳೂರಿನಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣವನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮಾಂಙಾಡ್‌ ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಪೀಕಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸಹಿತ 7 ಮಂದಿಯನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಝಲ್‌ (37), ಪತ್ನಿ ಕುಟ್ಟಿಕ್ಕಾಟೂರ್‌ ನಿವಾಸಿ ಎಂ.ಪಿ. ಲುಬಾ (29), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್‌. ಸಿದ್ದಿಕ್‌ (48), ಮಾಂಙಾಡ್‌ನ‌ ದಿಲಾದ್‌ (40), ಮುಟ್ಟತ್ತೋಡಿಯ ನಫೀಸತ್‌ ಮಿಸ್ರಿಯ (40), ಮಾಂಙಾಡ್‌ನ‌ ಅಬ್ದುಲ್ಲ ಕುಂಞಿ (32), ಪಡನ್ನಕ್ಕಾಡ್‌ನ‌ ರಫೀಕ್‌ (42) ಬಂಧಿತ ಆರೋಪಿಗಳಾಗಿದ್ದಾರೆ.

ಜನವರಿ 23 ರಂದು ರುಬಿನಾ ಎಂಬಾಕೆ ಮೊಬೈಲ್ ಮೂಲಕ 59 ವರ್ಷದ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಳು. ಶೈಕ್ಷಣಿಕ ಕಾರ್ಯಕ್ಕಾಕಿ ಲ್ಯಾಪ್ ಟಾಪ್ ಖರೀದಿ ಮಾಡಿದ್ದು ಅದು ಹಾಳಾಗಿದೆ ನಿಮ್ಮ ಸಮಾಜ ಸೇವೆ ಬಗ್ಗೆ ತಿಳಿದುಕೊಂಡಿದ್ದೇನೆ ಅದಕ್ಕಾಗಿ ಸಹಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಳು. ಅದರಂತೆ ಯುವತಿಯೊಂದಿಗೆ ಕಾಸರಗೋಡಿಗೆ ಆಗಮಿಸಿದ ಅವರು ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲ ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ಹೇಳಿದ್ದರು.

ಬಳಿಕ ಆರೋಪಿ ಯುವತಿ ರುಬಿನಾ ಮಂಗಳೂರಿನ ವಸತಿ ಗೃಹವೊಂದಕ್ಕೆ ಆ ವ್ಯಕ್ತಿಯನ್ನು ಕೆದುಕೊಂಡು ಹೋಗಿ ಇತರರ ಜೊತೆಗೂಡಿ ಬಲವಂತದಿಂದ ನಗ್ನ ಫೋಟೊ ತೆಗೆದುಕೊಂಡಿದ್ದಾರೆ, ಬಳಿಕ ಆರೋಪಿಗಳು ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ಮಾಂಗಾಡ್ ನಿವಾಸಿಯಾದ 59 ವರ್ಷದ ವ್ಯಕ್ತಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಮೇಲ್ಪರಂಬ ಠಾಣಾ ಎಸ್‌ ಐ ಸುರೇಶ್ ಮತ್ತು ಅರುಣ್ ಮೋಹನ್ ಎಲ್ಲಾ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್ಯ