
ಕಡಬ: ತೋಡಿಗೆ ಹಾಕಿದ ಕಾಲು ಸಂಕದಿಂದ ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆಎಡಮಂಗಲ ಗ್ರಾಮದ ಕರಿಂಬಿಲದಲ್ಲಿ ನಡೆದಿದೆ.

ಕರಿಂಬಿಲ ಶಶಿಕಲಾ ಶೆಟ್ಟಿ ಎಂಬವರ ಜಾಗದಲ್ಲಿ ಕೇರಳ ಮೂಲದ ಸುರೇಶ ಸತ್ಯವನ್ ಎಂಬವರು ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು.ಜ.24 ರಂದು ತೋಟದಲ್ಲಿ ಸಣ್ಣ ತೋಡಿಗೆ ತಾತ್ಕಾಲಿಕವಾಗಿ ಹಾಕಿದ್ದ ಅಡಿಕೆ ಮರದ ಕಾಲು ಸಂಕದಲ್ಲಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಗ್ನಿ ಶಾಮಕದಳದವರು ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಬಿಜು ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
