ಕಡಬ: ಅಕ್ರಮ‌ ಕಸಾಯಿಖಾನೆಗೆ ಪೊಲೀಸರಿಂದ ದಾಳಿ – 70 ಕೆಜಿ ದನದ ಮಾಂಸ, ಪಿಕಪ್ ವಾಹನ ಸಹಿತ ಮೂವರ ಬಂಧನ

ಕಡಬ: ಅಕ್ರಮ‌ ಕಸಾಯಿಖಾನೆಗೆ ಪೊಲೀಸರಿಂದ ದಾಳಿ – 70 ಕೆಜಿ ದನದ ಮಾಂಸ, ಪಿಕಪ್ ವಾಹನ ಸಹಿತ ಮೂವರ ಬಂಧನ

ಕಡಬ : ಜ.25. ಖಚಿತ ಮಾಹಿತಿಯ ಮೇರೆಗೆ ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ಮೂವರನ್ನು ಬಂಧಿಸಿ 70 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಕಲಾಯಿ ನಿವಾಸಿ ಸುಲೈಮಾನ್ ಎಂಬಾತನ ಮನೆಯ ಸಮೀಪ ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಠಾಣಾ ತನಿಖಾ ಎಸ್ಐ ಅಕ್ಷಯ್ ಡವಗಿ ಹಾಗೂ ಸಿಬ್ಬಂದಿಗಳು, ಆರೋಪಿಗಳಾದ ಝಕರಿಯಾ, ಶಿಯಾಬ್ ಹಾಗೂ ಮುನವ್ವರ್ ಎಂಬವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಸುಲೈಮಾನ್ ಪರಾರಿಯಾಗಿದ್ದು, 70 ಕೆಜಿ ದನದ ಮಾಂಸ, ಒಂದು ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ರಾಜ್ಯ