
ಸುಳ್ಯದಿಂದ ಬೆಳ್ಳಾರೆಗೆ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಮುಖ ರಸ್ತೆಯ ಸೋಣಂಗೇರಿಯಲ್ಲಿ ಬಸ್ಸು ತಂಗುದಾಣವಿಲ್ಲದೆ ಪ್ರಯಾಣಿಕರು ಬೇಸಿಗೆಯ ಬಿಸಿಲಿನ ಝಳಕ್ಕೆ ಹೈರಾಣಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದಾರೆ.

ಜಾಲ್ಸೂರು ಗ್ರಾಮ ಪಂಚಾಯತ್ ಗೆ ಒಳಪಡುವ ಸೋಣಂಗೇರಿ ಪ್ರದೇಶವು , ಕುಕ್ಕೆ ಸುಬ್ರಹ್ಮಣ್ಯ, ಬೆಳ್ಳಾರೆ, ಜಾಲ್ಸೂರು ,ಸುಳ್ಯ ,ಸಂಪರ್ಕಿಸ ಬಲ್ಲ ಒಂದು ಜಂಕ್ಷನ್ ಆಗಿದ್ದು ಇಲ್ಲಿ ದಿನ ಪ್ರತಿ ನೂರಾರು ಪ್ರಯಾಣಿಕರು ಶಾಲೆ, ಕಚೇರಿ, ಆಸ್ಪತ್ರೆ, ಆಹಾರ ಸಾಮಾಗ್ರಿಗಳ ಖರೀದಿಗೆ ಇದೇ ಸೋಣಂಗೇರಿ ಮೂಲಕವೇ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ ಹಿಂದೆ ಇಲ್ಲಿ ಎರಡು ಬಸ್ಸು ತಂಗುದಾಣಗಳಿದ್ದು ರಸ್ತೆ ಅಗಲೀಕರಣ ಸಂದರ್ಭ ಬಸ್ಸು ತಂಗುದಾಣವನ್ನು ತೆರವು ಗೊಳಿಸಲಾಗಿತ್ತು, ಇದೀಗ ರಸ್ತೆ ಅಗಲಿಕರಣ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಸೋಣಂಗೇರಿ ವೃತ್ತ ರಚನೆಯಾಗಲು ಮಾತ್ರವೇ ಬಾಕಿಉಳಿದಿದೆ , ಈಗಲಾದರು ಶಾಲಾ ಕಾಲೇಜು ವಿದ್ಯಾರ್ಥಿಗಳ ಕಾರ್ಮಿಕರ ಅನುಕೂಲಕ್ಕಾಗಿಮತ್ತೆ ಬಸ್ಸುತಂಗುದಾಣವನ್ನು ನಿರ್ಮಿಸಿ ಕೊಡುವಂತೆ ಸ್ಥಳಿಯರು ಆಗ್ರಹ ವ್ಯಕ್ತಪಡಿಸಿದ್ದಾರೆ.




