
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಬಳಗದ ಹಿರಿಯ ಸದಸ್ಯ ಲೋಕನಾಥ್ ಅಮೆಚೂರು ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಭಾರತಿ ರಮೇಶ್, ಸಹ ಕಾರ್ಯದರ್ಶಿಯಾಗಿ ಜಯಪ್ಪ ಹಾನಗಲ್ ಹಾಗೂ ಕೋಶಾಧಿಕಾರಿಯಾಗಿ ಕಡ್ಲೇರ ತುಳಸಿ ಮೋಹನ್ ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎಂ.ಪಿ.ಕೇಶವಕಾಮತ್, ಕೆ.ಟಿ.ಬೇಬಿ ಮ್ಯಾಥ್ಯು, ಡಿ.ಕೆ.ಹರೀಶ್ ಸರಳಾಯ, ಕೆ.ವಿ.ಉಮೇಶ್, ಎಂ.ಎಂ.ಲಿಯಾಕತ್ ಆಲಿ, ಅಂಬೆಕಲ್ ನವೀನ್, ಬಿ.ಆರ್.ಜೋಯಪ್ಪ, ಶ್ವೇತಾ ರವೀಂದ್ರ, ಪಿ.ಪಿ.ಸುನಿತ ಪ್ರೀತು ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಟಿ.ಪಿ.ರಮೇಶ್, ವಿಲ್ಫ್ರೆಡ್ ಕ್ರಾಸ್ತಾ, ಎಸ್.ಐ.ಮುನೀರ್ ಅಹ್ಮದ್, ಟಿ.ಜಿ.ಪ್ರೇಮ್ ಕುಮಾರ್, ಪಿ.ಜಿ.ರಾಜಶೇಖರ್ ಅವರನ್ನು ನೇಮಿಸಲಾಯಿತು.ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರ ಗೈರು ಹಾಜರಿಯಲ್ಲಿ ಬಳಗದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
