
ಸುಳ್ಯ : ಜ .23 ರಂದು ಕಾಣಿಯೂರು ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್ (15 ವ ) ನಾಪತ್ತೆಯಾದ ವಿದ್ಯಾರ್ಥಿ.

ಬೆಳಿಗ್ಗೆ 7.45 ಗಂಟೆಗೆ ಮನೆಯಿಂದ ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುತ್ತಾನೆ. ಎತ್ತರ 5 ಅಡಿ ,ಸಪೂರ ಶರೀರ, ಗೋಧಿ ಮೈಬಣ್ಣ. ಗುಲಾಬಿ ಬಣ್ಣದ ಶರ್ಟು, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್, ಕೈಯಲ್ಲಿ ಕೇಸರಿ ಬಣ್ಣದ ದಾರ ,ವಾಚ್, ಉಂಗುರ ಧರಿಸಿರುತ್ತಾನೆ ಈ ವಿದ್ಯಾರ್ಥಿಯ ಗುರುತು ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ
