ಪುತ್ತೂರು : ನಸುಕಿನ ವೇಳೆ ಕೊಂಬೆಟ್ಟುವಿನಲ್ಲಿ ಮನೆಗಳ ಬಾಗಿಲು ಬಡಿಯುತ್ತಾ ಓಡಾಡಿದ ಇಬ್ಬರು ಅಪರಿಚಿತರು – ಅನುಮಾನಸ್ಪದ  ತಿರುಗಾಡುತ್ತಿದ್ದಾತನನ್ನು ಸ್ಥಳಿಯರ ನೆರವಿನಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯ ನಗರಸಭಾ ಸದಸ್ಯ

ಪುತ್ತೂರು : ನಸುಕಿನ ವೇಳೆ ಕೊಂಬೆಟ್ಟುವಿನಲ್ಲಿ ಮನೆಗಳ ಬಾಗಿಲು ಬಡಿಯುತ್ತಾ ಓಡಾಡಿದ ಇಬ್ಬರು ಅಪರಿಚಿತರು – ಅನುಮಾನಸ್ಪದ ತಿರುಗಾಡುತ್ತಿದ್ದಾತನನ್ನು ಸ್ಥಳಿಯರ ನೆರವಿನಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯ ನಗರಸಭಾ ಸದಸ್ಯ

ಆದಿತ್ಯವಾರ ನಸುಕಿನ ಜಾವ ಪುತ್ತೂರು ನಗರದ ಕೊಂಬೆಟ್ಟು ಬಳಿಯ ಸುಧಾ ನರ್ಸರಿ ವಠಾರದಲ್ಲಿನ 3 ಮನೆಗಳ ಬಾಗಿಲನ್ನು ಇಬ್ಬರು ಅಪರಿಚತರು ಬಡಿದು ಆತಂಕದ ವಾತವಾರಣ ಸೃಷ್ಟಿಸಿದ ಘಟನೆ ನಡೆದಿದೆ.

ಭಾನುವಾರ ಬೆಳಿಗ್ಗೆ ಸುಮಾರು 5 ರಿಂದ 5.30ರ ಸುಮಾರಿಗೆ ಇಬ್ಬರು ಅಪರಿಚಿತರು ಮೂರು ಮನೆಗಳ ಬಾಗಿಲು ಬಡಿದು ಮನೆಯ ಸುತ್ತಾಮುತ್ತಾ ಓಡಾಡಿದ್ದಾರೆ.ಅಲ್ಲದೇ ಹಿಡಿಯಲು ಹೋದ ಮನೆಯವರ ಮೇಲೆ ಆಕ್ರಮಣ ನಡೆಸಲು ಮುಂದಾಗಿದ್ದಾರೆ.ತಕ್ಷಣ ಸ್ಥಳೀಯ ಮನೆಯವರಾದ ಪ್ರವೀಣ್ ರಾವ್ ರವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸ್ಥಳೀಯ ನಗರಸಭಾ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ನಗರ ಸಭಾ ಸದಸ್ಯರೊಂದಿಗೆ ಸ್ಥಳೀಯರಾದ ಪ್ರವೀಣ್ ಹಾಗೂ ಜನಾರ್ದನ ಮೊದಲಾದವರು ಅಪರಿಚಿತರಿಗಾಗಿ ಶೋಧ ನಡೆಸಿದ್ದಾರೆ. ಈ ವೇಳೆ ತಾಲೂಕು ಕ್ರೀಡಾಂಗಣದ ಬಳಿ ಈ ಪೈಕಿ ಸಾಲೆತ್ತೂರು ಮೂಲದ ಓರ್ವ ವ್ಯಕ್ತಿ ಓಡುತ್ತಿರುವುದು ಪತ್ತೆಯಾಗಿದ್ದು, ಅವನನ್ನು ಸ್ಥಳೀಯರು ಹಾಗೂ ಕ್ರೀಡಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದ ನಗರ ಠಾಣಾ ಕಾನ್ಸ್ಟೇಬಲ್ ಗಳ ಸಹಾಯದಿಂದ ಹಿಡಿದು ನಗರ ಠಾಣೆಗೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.

ರಾಜ್ಯ